ಬೆಳಗಾವಿ ವಿಭಜನೆ ಮಾಡೋದಾದರೆ ಮೊದಲ ಆದ್ಯತೆ ಬೈಲಹೊಂಗಲಕ್ಕೆ ಕೊಡಿ: ಜಾರಕಿಹೊಳಿ ಹೇಳಿಕೆಗೆ ವಿರೋಧ

ಬೆಳಗಾವಿ: ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಬೆಳಗಾವಿ ಜಿಲ್ಲೆಯನ್ನು (Belagavi District) ವಿಭಜನೆ ಮಾಡಲಾಗುತ್ತದೆ ಎಂಬ ಹೇಳಿಕೆಯ ಬೆನ್ನಲ್ಲೇ ಜಿಲ್ಲೆಯಲ್ಲಿ ಅಸಮಾಧಾನದ ಹೊಗೆ ಎದ್ದಿದೆ.

ಬೈಲಹೊಂಗಲ (Bailhongal) ಮತ್ತು ಅಥಣಿ (Athani) ತಾಲೂಕಿನ ಜನರು ಜಾರಕಿಹೊಳಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮುಂದಿನ ಹೋರಾಟದ ರೂಪರೇಷೆಗಳ ಮಾಡಲು ಪೂರ್ವಭಾವಿ ಸಭೆ ನಡೆಸಿದ್ದಾರೆ. ಬೈಲಹೊಂಗಲ ಮೂರುಸಾವಿರಮಠದ ಪೀಠಾಧಿಪತಿ ಪ್ರಭು ನೀಲಕಂಠ ಸ್ವಾಮೀಜಿ ನೇತೃತ್ವದಲ್ಲಿ ಜಿಲ್ಲಾ ಹೋರಾಟ ಸಮಿತಿಯ ಪೂರ್ವಭಾವಿ ಸಭೆ ನಡೆಸಿದೆ.  ಇದನ್ನೂ ಓದಿ: ನಾನು ಕಾಂಗ್ರೆಸ್‌ ಕಾರ್ಯಕರ್ತನಾಗಿ ಮೇಲೆ ಬಂದವನು, JDS ಕಚೇರಿಯಲ್ಲೇ ಕಾಂಗ್ರೆಸ್ ನನ್ನ ತಾಯಿ ಅಂದಿದ್ದೇನೆ: ವಿಶ್ವನಾಥ್

ಬೆಳಗಾವಿ ವಿಭಜನೆ ಮಾಡುವುದಾದರೆ ಮೊದಲ ಆದ್ಯತೆ ಬೈಲಹೊಂಗಲಕ್ಕೆ ಕೊಡಬೇಕು. ಬೈಲಹೊಂಗಲ ತಾಲೂಕನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂಬ ಬೇಡಿಕೆಯನ್ನು ಹೋರಾಟಗಾರರು  ಮುಂದಿಟ್ಟಿದ್ದಾರೆ.

ಬ್ರಿಟಿಷರ ಕಾಲದಿಂದಲೂ ಆಡಳಿತಾತ್ಮಕ ಕೇಂದ್ರವಾಗಿದ್ದ ಬೈಲಹೊಂಗಲದಲ್ಲಿ ಜಿಲ್ಲಾ ಘೋಷಣೆಗೆ ಬೇಕಾದ ಅಗತ್ಯ ಕಚೇರಿಗಳಿವೆ. ಜಿಲ್ಲೆಗೆ ಅರ್ಹವಲ್ಲದ ತಾಲೂಕಿನ ಬಗ್ಗೆ ಮಾತನಾಡುವುದನ್ನು ಸಚಿವರು ಕೈಬಿಡಬೇಕು. ಬೈಲಹೊಂಗಲ ತಾಲೂಕನ್ನ ಜಿಲ್ಲೆಯನ್ನಾಗಿ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಒಂದು ವೇಳೆ ಬೈಲಹೊಂಗಲ ಜಿಲ್ಲೆಯಾಗದೇ ಇದ್ದರೆ ಬೆಳಗಾವಿ ಅಖಂಡ ಜಿಲ್ಲೆಯಾಗಿಯೇ ಉಳಿಯಬೇಕು ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದಾರೆ.

 

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]