ಭಾರತೀಯ ಪೌರತ್ವ ಪಡೆದ ಅಕ್ಷಯ್‌ ಕುಮಾರ್

ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅವರು ಭಾರತೀಯ ಪೌರತ್ವ (Indian Citizenship) ಪಡೆದಿದ್ದಾರೆ. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು (Independence Day) ಭಾರತೀಯ ಪೌರತ್ವ ಸಿಕ್ಕಿರುವ ಬಗ್ಗೆ ನಟ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನಟ ಅಕ್ಷಯ್ ಕುಮಾರ್ ಇದೀಗ ಭಾರತೀಯ ನಾಗರಿಕ ಎಂದೆನಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಅವರಿಗೆ ಸಿಹಿಸುದ್ದಿ ಸಿಕ್ಕಿದೆ. ಅಫಿಷಿಯಲ್ ಆಗಿ ಭಾರತೀಯ ಪೌರತ್ವ ಸಿಕ್ಕಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಹೃದಯ ಮತ್ತು ಪೌರತ್ವ ಎರಡು ಹಿಂದೂಸ್ತಾನಿ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಜೈ ಹಿಂದ್ ಎಂದು ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕೊನೆಗೂ ಭಾರತೀಯ ಪೌರತ್ವವನ್ನ ಅಕ್ಷಯ್ ಪಡೆದಿದ್ದಾರೆ.

ಇಲ್ಲಿಯವರೆಗೂ ಅಕ್ಷಯ್‌ ಕುಮಾರ್‌ಗೆ ಕೆನಡಾದ ಪೌರತ್ವ ಇತ್ತು. ಈ ವಿಚಾರವಾಗಿ ಸಾಕಷ್ಟು ಟೀಕೆಗಳನ್ನ ನಟ ಎದುರಿಸಿದ್ದರು.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]