ಆ‌ಗಸ್ಟ್‌ 16ರಂದು ಸ್ಪಂದನಾ ಉತ್ತರ ಕ್ರಿಯೆಗೆ ಸರ್ವರಿಗೂ ಆಹ್ವಾನಿಸಿದ ವಿಜಯ ರಾಘವೇಂದ್ರ ಕುಟುಂಬ

ಟ ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ಅವರು ಕೆಲದಿನಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಇದೀಗ ಸ್ಪಂದನಾ ಉತ್ತರ ಕ್ರಿಯೆಗೆ ಕುಟುಂಬ ಸಿದ್ಧತೆ ಮಾಡುಕೊಳ್ಳುತ್ತಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಭಾಗವಹಿಸುವಂತೆ ವಿಜಯ ಕುಟುಂಬ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ:ಪಡ್ಡೆಗಳ ನಿದ್ದೆಗೆಡಿಸಿದ ‘ನನ್ನರಿಸಿ ರಾಧೆ’ಯ ಕೌಸ್ತುಭ

ಆತ್ಮೀಯರೇ ನಮ್ಮ ಮನೆಯ ಮಗಳು ಸ್ಪಂದನಾ ವಿಜಯ ರಾಘವೇಂದ್ರ ಅವರು ಆಗಸ್ಟ್ 6ರಂದು ನಮ್ಮನ್ನಗಲಿರಿವುದು ನಿಮಗೆಲ್ಲರಿಗೂ ತಿಳಿದ ವಿಷಯ. ಉತ್ತರ ಕ್ರಿಯೆ ಆಗಸ್ಟ್ 16ರ ಬುಧವಾರದಂದು ಮಲ್ಲೇಶ್ವರ ಸ್ವಗೃಹದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಶಾಂತಿ ಹೋಮ ನಡೆಯಲಿದೆ. ಮಧ್ಯಾಹ್ನ 1 ಗಂಟೆಯಿಂದ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ (ಬಿಬಿಎಂಪಿ ಮೈದಾನ) ಭೋಜನವನ್ನು ಹಮ್ಮಿಕೊಂಡಿದ್ದೇನೆ. ಆದ್ದರಿಂದ ತಾವುಗಳು ಭಾಗವಹಿಸಿ ಅವರ ಆತ್ಮಕ್ಕೆ ಚಿರಶಾಂತಿ ಕೋರಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಬಿ.ಕೆ ಶಿವರಾಂ ಮತ್ತು ಎಸ್.ಎ ಚಿನ್ನೆಗೌಡರು ಮತ್ತು ಕುಟುಂಬಸ್ಥರು ಸರ್ವರಿಗೂ ಆಹ್ವಾನ ನೀಡಿದ್ದಾರೆ.

ಕೆಲದಿನಗಳ ಹಿಂದೆ ಸ್ಪಂದನಾ ಸ್ನೇಹಿತರ ಜೊತೆ ಬ್ಯಾಂಕಾಕ್‌ಗೆ ತೆರಳಿದ್ದರು. ಆಗಸ್ಟ್ 6ರಂದು ಹೃದಯಾಘಾತದಿಂದ (Heart Attack) ಸ್ಪಂದನಾ ವಿಧಿವಶರಾಗಿದ್ದರು. ಆಗಸ್ಟ್ 9ರಂದು ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾರ ಅಂತಿಮ ಸಂಸ್ಕಾರ ನಡೆಯಿತು. ಸ್ಪಂದನಾ ಹಠಾತ್ ನಿಧನ ವಿಜಯ ಮತ್ತು ಅವರ ಕುಟುಂಬಕ್ಕೆ ಶಾಕ್ ನೀಡಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]