ಅಂತಾರಾಜ್ಯ ಡ್ರಗ್ ಪೆಡ್ಲರ್‌ಗಳೊಂದಿಗೆ ನಂಟು- ಯುವಕ ಅರೆಸ್ಟ್

ಹುಬ್ಬಳ್ಳಿ: ಅಂತಾರಾಜ್ಯ ಡ್ರಗ್ ಪೆಡ್ಲರ್‌ಗಳೊಂದಿಗೆ (Drug Peddler) ನಂಟು ಹೊಂದಿದ್ದ ಹುಬ್ಬಳ್ಳಿ ಮೂಲದ ಯುವಕನನ್ನು ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಸೂರಜ್ ಗೌಡ ಕಾನಗೌಡ ಬಂಧಿತ ಆರೋಪಿಗಳು. ನಗರದ ಜನತಾ ಬಜಾರ್ ನಲ್ಲಿರುವ ಮೆಡಿಕಲ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ಸೂರಜ್, ಹಲವು ತಿಂಗಳಿಂದ ಅಂತಾರಾಜ್ಯ ಡ್ರಗ್ ಪೆಡ್ಲರ್ ಗಳೊಂದಿಗೆ ನಂಟು ಹೊಂದಿ, ನಿರ್ಬಂಧಿತ ಮೆಡಿಸನ್ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಎನ್‍ಡಿಪಿಎಸ್ ಆ್ಯಕ್ಟ್ ಅಡಿ ತಮಿಳುನಾಡಿನ ಕೊಯಮತ್ತೂರಿನ ಪೀಲಮೆಡು ಠಾಣೆಯ ಪೊಲೀಸರು ಕೆಲ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.

ವಿಚಾರಣೆ ವೇಳೆ ಹುಬ್ಬಳ್ಳಿ ಮೂಲದ ಸೂರಜ್‍ಗೌಡ ಅವರೊಂದಿಗೆ ನಂಟು ಹೊಂದಿರುವ ವಿಚಾರನ್ನು ಪೆಡ್ಲರ್ ಗಳು ಬಾಯಿಬಿಟ್ಟಿದ್ದಾರೆ. ಪ್ರಕರಣ ಬೆನ್ನುಹತ್ತಿ ಹುಬ್ಬಳ್ಳಿಗೆ ಆಗಮಿಸಿದ್ದ ಕೊಯಮತ್ತೂರಿನ ಪೊಲೀಸರು, ನಿರ್ಬಂಧಿತ ಮೆಡಿಷನ್ ಖರೀದಿಸುವ ನೆಪದಲ್ಲಿ ಸೂರಜ್ ಗೌಡನನ್ನು ಬಲೆಗೆ ಕೆಡಿವಿದ್ದಾರೆ. ಇದನ್ನೂ ಓದಿ: ರಾಹುಲ್ ಮದ್ವೆಯಾಗ್ತೀನಿ – ಒಂದು ಷರತ್ತು ಪಾಲಿಸಬೇಕು ಎಂದ ಶೆರ್ಲಿನ್ ಚೋಪ್ರಾ

ಹುಬ್ಬಳ್ಳಿ ಗ್ರಾಮೀಣ ಮತ್ತು ಉಪನಗರ ಪೊಲೀಸರು ತಮಿಳುನಾಡಿನ (Tamilnadu) ಪೊಲೀಸರಿಗೆ ಸಹಕಾರ ನೀಡಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]