ನಟಿ ತೃಪ್ತಿ ಜೊತೆ ಬ್ರೇಕಪ್ ಮಾಡಿಕೊಂಡ ಅನುಷ್ಕಾ ಶರ್ಮಾ ಸಹೋದರ

ಬಾಲಿವುಡ್ (Bollywood) ನಟಿ ಅನುಷ್ಕಾ ಶರ್ಮಾ (Anushka Sharma) ಮನೆಯ ವಿಚಾರ ಸದ್ಯ ಬಿಟೌನ್‌ನಲ್ಲಿ ಹಾಟ್ ಟಾಪಿಕ್ ಆಗಿದೆ. ಯುವ ನಟಿ ತೃಪ್ತಿ ದಿಮ್ರಿ (Tripthii Dimri) ಜೊತೆ ಅನುಷ್ಕಾ ಸಹೋದರ ಡೇಟ್ ಮಾಡುತ್ತಿದ್ದರು. ಇದೀಗ ಬಹುಕಾಲದ ಗೆಳತಿ ಜೊತೆ ಕರ್ಣೇಶ್ ಶರ್ಮಾ (Karnesh Sharma) ಬ್ರೇಕಪ್ ಮಾಡಿಕೊಂಡಿದ್ದಾರೆ.

ಸಿನಿಮಾ ಸೆಲೆಬ್ರಿಟಿಗಳು ಅಂದ ಮೇಲೆ ಅವರ ಬಗ್ಗೆ ಅವರ ಕುಟುಂಬದ ಬಗ್ಗೆ ಅಭಿಮಾನಿಗಳು ತಿಳಿದುಕೊಳ್ಳುವ ಕುತೂಹಲದಲ್ಲಿರುತ್ತಾರೆ. ಸ್ಟಾರ್‌ಗಳು ಮತ್ತು ಮನೆಯ ಸದಸ್ಯರು ಹೇಗಿರುತ್ತಾರೆ. ಏನ್ಮಾಡ್ತಿದ್ದಾರೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಆಸಕ್ತಿಯಿರುತ್ತದೆ. ಇದೀಗ ಅನುಷ್ಕಾ ಶರ್ಮಾ ಮನೆಯ ವಿಚಾರ ಚಾಲ್ತಿಗೆ ಬಂದಿದೆ. ನಟಿಯ ಸಹೋದರ ಕರ್ಣೇಶ್ ಶರ್ಮಾರ ಬ್ರೇಕಪ್ ನ್ಯೂಸ್ ಸದ್ದು ಮಾಡ್ತಿದೆ. ಇದನ್ನೂ ಓದಿ:ಗೋಲ್ಡನ್ ಹೀರೋಗೆ ಜೋಡಿಯಾದ ‘ಗಟ್ಟಿಮೇಳ’ ನಟಿ ಶರಣ್ಯ ಶೆಟ್ಟಿ

ಅನುಷ್ಕಾ- ಕರ್ಣೇಶ್ ಜಂಟಿಯಾಗಿ ನಿರ್ಮಾಣ ಸಂಸ್ಥೆಯೊಂದನ್ನ ತೆರೆದಿದ್ದರು. ಈ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನ ಕರ್ಣೇಶ್ ಶರ್ಮಾಗೆ ವಹಿಸಿದ್ದರು. ‘ಪಾತಾಳ್ ಲೋಕ್’ (Pathal Loka) ವೆಬ್ ಸೀರಿಸ್ ಮೂಲಕ ಸದ್ದು ಮಾಡಿದ್ದ ಕರ್ಣೇಶ್, ನಟಿ ತೃಪ್ತಿ ದಿಮ್ರಿ ಜೊತೆ ಡೇಟಿಂಗ್ ಮಾಡ್ತಿದ್ದರು. ಈವೆಂಟ್‌ವೊಂದರಲ್ಲಿ ಪರಿಚಯವಾದ ಇಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಕರ್ಣೇಶ್- ತೃಪ್ತಿ ಒಬ್ಬರನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಜೊತೆಗಿದ್ದ ಮೆಮೊರೆಬಲ್ ಫೋಟೋಗಳನ್ನ ಕೂಡ ಡಿಲೀಟ್ ಮಾಡಿದ್ದಾರೆ. ಇಬ್ಬರ ನಡೆ ಬ್ರೇಕಪ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. 3 ವರ್ಷಗಳ ಕಾಲ ಒಟ್ಟಿಗೆಯಿದ್ದ ಜೋಡಿ ಈಗ ಬೇರೇ ಆಗಿದ್ದಾರೆ. ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ ತೃಪ್ತಿ, ‘ಅನಿಮಲ್ʼ (Animal) ಚಿತ್ರದಲ್ಲಿ ರಣ್‌ಬೀರ್- ರಶ್ಮಿಕಾ ಮಂದಣ್ಣ(Rashmika Mandanna) ಜೊತೆ ನಟಿಸಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]