ಭಾರೀ ಅನಾಹುತದಿಂದ ಮಹಾರಾಷ್ಟ್ರ ಸಚಿವರು ಜಸ್ಟ್ ಮಿಸ್

ವಿಜಯಪುರ: ಭಾರೀ ಅನಾಹುತದಿಂದ ಮಹರಾಷ್ಟ್ರ ಸಚಿವರು ಪಾರಾದ ಘಟನೆ ವಿಜಯಪುರದಲ್ಲಿ ನಡೆದಿದೆ.

ನೃತ್ಯ ಮಾಡುತ್ತಿದ್ದ ಮಹಿಳೆಯ ತಲೆಯ ಮೇಲಿಂದ ಮಡಿಕೆಗಳು ಬಿದ್ದಿದ್ದು, ಮಹಾರಾಷ್ಟ್ರ (Maharastra) ದ ಆಹಾರ ಸಚಿವ ಸಂಜಯ್ ಬಾವು ರಾಠೋಡ್ (Sanjay Bhau Rathod) ಬಚಾವ್ ಆಗಿದ್ದಾರೆ. ಇದನ್ನೂ ಓದಿ: ಅನ್ನಭಾಗ್ಯ ಗ್ಯಾರಂಟಿ ಗೊಂದಲ- ರಾಜ್ಯದ ರೈತರಿಂದ ಅಕ್ಕಿ ಖರೀದಿಸಲ್ವಾ ಸಿಎಂ?

ಏನಿದು ಘಟನೆ..?: ವಿಜಯಪುರ (Vijayapura) ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾದಲ್ಲಿ ಭಾನುವಾರ ದುರ್ಗಾದೇವಿ ಜಾತ್ರೆ ಇತ್ತು. ಇದರ ವೇದಿಕೆ ಕಾರ್ಯಕ್ರಮಲ್ಲಿ ವೇದಿಕೆ ಮೇಲೆ ಮಹಿಳೆ ನೃತ್ಯ ಮಾಡುತ್ತಿದ್ದಳು. ಆಗ ತಲೆಯ ಮೇಲೆ ಮಡಿಕೆಗಳನ್ನು ಇಟ್ಟುಕೊಂಡು ಗ್ಲಾಸ್ ಮೇಲೇ ನಿಂತು ನೃತ್ಯ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ.

ಒಂದರ ಮೇಲೊಂದರಂತೆ 10 ಕ್ಕೂ ಅಧಿಕ ಮಡಿಕೆಗಳನ್ನು ತಲೆಯ ಮಹಿಳೆ ಮೇಲಿಟ್ಟುಕೊಂಡಿದ್ದಳು. ಈ ವೇಳೆ ಮಂಟಪದ ಮೇಲ್ಭಾಗ ತಗುಲಿ ಏಕಾಏಕಿ ಕೆಳಗೆ ಮಡಿಕೆಗಳು ಬಿದ್ದವು. ಸಚಿವರ ಕುಳಿತ ಜಾಗದಲ್ಲೇ ಮಡಿಕೆಗಳು ಬಿದ್ದವು. ಪಕ್ಕದಲ್ಲಿ ಕುಳಿತ ವ್ಯಕ್ತಿಗಳು ಮಡಿಕೆಗಳಿಗೆ ಕೈ ಅಡ್ ಹಿಡಿದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿ ಸಚಿವರು ಸ್ವಲ್ಪದ್ರಲ್ಲೆ ಪಾರಾಗಿದ್ದಾರೆ.