ಪತ್ನಿಯನ್ನ ಕೊಲೆ ಮಾಡಿ, ಮಾತೇ ಆಡ್ತಿಲ್ಲ ಅಂತಾ ಗೋಳಾಡ್ತಿದ್ದ ಪತಿ – ಖತರ್ನಾಕ್‌ ಸಿಕ್ಕಿ ಬಿದ್ದದ್ದು ಹೇಗೆ?

ಬೆಂಗಳೂರು: ಪತ್ನಿಯನ್ನ ಕೊಲೆ ಮಾಡಿ ಆಕೆ ಮಾತೇ ಆಡ್ತಿಲ್ಲ ಅಂತಾ ಗೋಳಾಡುತ್ತಿದ್ದ ಪತಿ, ನಂತರ ಪೊಲೀಸರಿಗೆ ತಗಲಾಕಿಕೊಂಡಿರುವ ಘಟನೆ ಬೆಂಗಳೂರಿನ ಯಶವಂತಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ (Yeshwantpur Police) ನಡೆದಿದೆ.

ಪ್ರಿಯಾ ಕೊಲೆಯಾದ ಮಹಿಳೆ (Women), ಶರತ್‌ ಕೊಲೆ ಆರೋಪಿಯಾಗಿದ್ದಾನೆ. ಪತ್ನಿಯನ್ನ ಕೊಲೆಗೈದ ಶರತ್‌ ನಂತರ ಪತ್ನಿ ಮಾತನಾಡ್ತಿಲ್ಲ ಅಂತಾ ಗೋಳಾಡುತ್ತಾ ಮೃತದೇಹವನ್ನ ಆಸ್ಪತ್ರೆಗೆ (Hospital) ಹೊತ್ತೊಯ್ದಿದ್ದಾನೆ. ಗಂಡನ ಗೋಳಾಟ ಕಂಡು ವೈದ್ಯರು ಮೊದಲು ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ತಪಾಸಣೆ ನಡೆಸಿದ ಬಳಿಕ ಮಹಿಳೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಪತ್ನಿ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಕಣ್ಣೀರು ಹಾಕಿ ಪತಿ ಶರತ್‌ ಹೈಡ್ರಾಮ ಮಾಡಿದ್ದಾನೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತ; ಸಂಚಾರ ರದ್ದಾಗಿ ಬೆಂಗ್ಳೂರಲ್ಲೇ ನಿಂತ ಬೆಂಗಳೂರು-ಗುವಾಹಟಿ ರೈಲು

ಯಶವಂತಪುರ ಪೊಲೀಸರು ಮೊದಲು ಇದನ್ನ ಅನುಮಾನಾಸ್ಪದ ಸಾವು ಎಂದು ಕೇಸ್‌ ದಾಖಲಿಸಿದ್ದರು. ಬಳಿಕ ತನಿಖೆಯಲ್ಲಿ ಗಂಡನ ಅಸಲಿ ಮುಖವಾಡ ಬಯಲಾಗಿದೆ. ಪತ್ನಿಯನ್ನ ತಾನೇ ಕೊಲೆ ಮಾಡಿ ಶವದೊಂದಿಗೆ ಆಸ್ಪತ್ರೆಗೆ ಬಂದು ನಾಟಕವಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬ್ರಿಜ್‌ಭೂಷಣ್‌ ಬಂಧನಕ್ಕೆ ಜೂನ್‌ 9 ಗಡುವು – ಕುಸ್ತಿಪಟುಗಳ ಪ್ರತಿಭಟನೆಗೆ ರೈತಸಂಘ ಬೆಂಬಲ

ಗಂಡ-ಹೆಂಡತಿ ನಡುವೆ ನಡೆದಿದ್ದೇನು?
ಶರತ್‌ ಎಂಬಾತ ಮೊದಲೇ ಮದುವೆಯಾಗಿದ್ದರೂ ಪ್ರಿಯಾಳನ್ನ 2ನೇ ಮದುವೆಯಾಗಿದ್ದ. ಪ್ರಿಯಾ ಮೊದಲ ಪತ್ನಿ ಮನೆಗೆ ಹೋಗ್ತೀಯಾ ಅಂತಾ ಪದೇ ಪದೇ ಜಗಳವಾಡುತ್ತಿದ್ದಳು. ಇದೇ ವಿಚಾರಕ್ಕೆ ಆಗಾಗ್ಗೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಇಬ್ಬರ ನಡುವೆ ವಾಗ್ವಾದ ಶುರುವಾಗಿ ಶರತ್‌ ಪ್ರಿಯಾಳಿಗೆ ಥಳಿಸಿದ್ದಾನೆ. ಹೊಡೆದ ರಭಸಕ್ಕೆ ಕೆಳಗೆ ಬಿದ್ದು ಪ್ರಿಯಾ ಮೃತಪಟ್ಟಿದ್ದಾಳೆ. ನಂತರ ಶರತ್‌ ಈ ಪ್ರಕರಣವನ್ನ ಮುಚ್ಚಿಡಲು ಆಸ್ಪತ್ರೆಗೆ ಕರೆದೊಯ್ದು ನಾಟಕವಾಡಿದ್ದಾನೆ. ಎರಡು ದಿನಗಳ ಬಳಿಕ ಅಸಲಿ ಸಂಗತಿ ಬಯಲಾಗಿದೆ.

ಶರತ್‌ ಹೈಡ್ರಾಮ ಕಂಡು ಮೊದಲೇ ಪೊಲೀಸರು ಅನುಮಾನಗೊಂಡಿದ್ದರು. ಮೃತದೇಹವನ್ನ ವೈದ್ಯರಿಂದ ಪರಿಶೀಲನೆ ನಡೆಸಿದಾಗ ಕುತ್ತಿಗೆ ಬಳಿ ಪಕ್ಕೆಲುಬು ಮುರಿದಿರುವುದು ಕಂಡುಬಂದಿತ್ತು. ಪ್ರಿಯಾ ಮೇಲೆ ಹಲ್ಲೆಯಾಗಿರುವುದಾಗಿಯೂ ವೈದ್ಯರು ತಿಳಿಸಿದ್ದರು. ಇದರಿಂದ ಕೊಲೆ ಮಾಡಿರುವುದು ಸ್ಪಷ್ಟವಾಗಿ ಯಶವಂತಪುರ ಪೊಲೀಸರು ಆರೋಪಿ ಶರತ್‌ನನ್ನ ಬಂಧಿಸಿ ಕೊಲೆ ಕೇಸ್‌ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.