ಪಠ್ಯ ಪುಸ್ತಕ ಪರಿಷ್ಕರಿಸ್ತೇವೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಸುತ್ತಿನ ಧರ್ಮ ದಂಗಲ್ ಶುರುವಾಗಿದೆ. ಕಾಂಗ್ರೆಸ್ ಸರ್ಕಾರ (Congress Government) ಆಪರೇಷನ್ ಪಠ್ಯ ಪುಸ್ತಕ ಮಾಡಲು ಹೊರಟಿದೆ.

ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಪಠ್ಯ ಪುಸ್ತಕ (Text Book) ಪರಿಷ್ಕರಣೆ ನಾವು ಮಾಡ್ತೀವಿ. ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ಪರಿಷ್ಕರಣೆ ಮಾಡ್ತೀವಿ. ಮಕ್ಕಳ ಮನಸ್ಸಿನಲ್ಲಿ ಕಲ್ಮಶ ತುಂಬುವ ಪಠ್ಯ ಕೈ ಬಿಡ್ತೀವಿ. ಈ ಬಗ್ಗೆ ಸಿಎಂ, ಡಿಸಿಎಂ ಜೊತೆ ಚರ್ಚಿಸಿ ಕಾನೂನು ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಹಿಜಬ್ (Hijab) ವಿಚಾರ ಕೋರ್ಟ್ ನಲ್ಲಿ ಇದೆ. ಲೀಗಲ್ ಒಪಿನಿಯನ್ ತಗೊಂಡು ಮುಂದೆ ಮಾತಾಡ್ತೀನಿ. ನಾಳೆಯಿಂದ ಶಾಲೆ ಪ್ರಾರಂಭವಾಗಲಿದ್ದು, ಶಿಕ್ಷಣ ಇಲಾಖೆ ಸಿದ್ಧವಾಗಿದೆ. ಮಕ್ಕಳು ಖುಷಿಯಿಂದ ಶಾಲೆಗೆ ಬನ್ನಿ ಎಂದರು. ಇದನ್ನೂ ಓದಿ: ಹಿಜಬ್‌ ವಿವಾದದಿಂದ ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ; ಸಮವಸ್ತ್ರ ಆದೇಶ ಪರಿಷ್ಕರಿಸಿ – ಸಿಎಂಗೆ ಸಾಹಿತಿಗಳು, ಬರಹಗಾರರ ಪತ್ರ

ಒಟ್ಟಿನಲ್ಲಿ ಸಾಹಿತಗಳ ಮನವಿ ಬೆನ್ನಲ್ಲೇ ಪಠ್ಯಪುಸ್ತಕ ಪರಿಷ್ಕರಣೆಗೆ ಸಿದ್ದರಾಮಯ್ಯ ಸರ್ಕಾರ ಚಾಲನೆ ಕೊಟ್ಟಿದೆ. ಸೋಮವಾರವಷ್ಟೇ ಸಾಹಿತಿಗಳ ನಿಯೋಗ ಸಿದ್ದರಾಮಯ್ಯ ಭೇಟಿಯಾಗಿ ಪಠ್ಯಪುಸ್ತಕ ಪರಿಷ್ಕರಣೆಗೆ ಒತ್ತಾಯ ಮಾಡಿತ್ತು. ಆ ಬಳಿಕ ಸಾಹಿತಿಗಳ ಒತ್ತಾಯದ ಮೇರೆಗೆ ಪಠ್ಯಪುಸ್ತಕ ಪರಿಷ್ಕರಣೆ ಮಾಡೋದಾಗಿ ಸರ್ಕಾರ ಹೇಳಿದೆ. ಹಾಗಾದ್ರೆ ಆರ್‍ಎಸ್‍ಎಸ್ ಸಂಸ್ಥಾಪಕ ಹೆಡ್ಗೆವಾರ್ ಪಠ್ಯಕ್ಕೆ ಬೀಳುತ್ತಾ ಕತ್ತರಿ?, ಚಕ್ರವರ್ತಿ ಸೂಲಿಬೆಲೆ ಪಠ್ಯಕ್ಕೆ ಕೊಕ್ ಕೊಡ್ತಾರಾ?, ರೋಹಿತ್ ಚಕ್ರತೀರ್ಥ ಪರಿಷ್ಕರಣೆ ವಾಪಸ್ ಪಡೆದು ಹೊಸ ಪಠ್ಯ ಪರಿಷ್ಕರಣೆಗೆ ಸಮಿತಿ ನೇಮಕ ಆಗುತ್ತಾ ಎಂಬ ಪ್ರಶ್ನೆಗಲು ಉದ್ಭವವಾಗಿದೆ.