ಫ್ಯಾಮಿಲಿಗಾಗಿ ನಟಿ ಅನುಷ್ಕಾ ಶರ್ಮಾ ಗಟ್ಟಿ ನಿರ್ಧಾರ

ಬಾಲಿವುಡ್ (Bollywood) ನಟಿ ಅನುಷ್ಕಾ ಶರ್ಮಾ (Anushka Sharma) ಅವರು ಸಿನಿಮಾ- ಕುಟುಂಬದ ಜವಾಬ್ದಾರಿ ಎರಡನ್ನು ಕೂಡ ಬ್ಯಾಲೆನ್ಸ್ ಮಾಡ್ತಿದ್ದಾರೆ. ಬೆಸ್ಟ್ ತಾಯಿ, ಪತ್ನಿಯಾಗಿ ಅನುಷ್ಕಾ ಸೈ ಎನಿಸಿಕೊಂಡಿದ್ದಾರೆ. ಬೆಳ್ಳಿತೆರೆಯಲ್ಲಿ ಬೆಸ್ಟ್ ನಟಿಯಾಗಿ ಗಮನ ಸೆಳೆದ ಅನುಷ್ಕಾ ನಡೆಗೆ ಇದೀಗ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂತಹದ್ದು, ಏನಾಯ್ತು ಅಂತೀರಾ.? ಇಲ್ಲಿದೆ ಉತ್ತರ

ಶಾರುಖ್ ಖಾನ್, ಆಮೀರ್ ಖಾನ್, ರಣ್‌ಬೀರ್ ಕಪೂರ್ ಜೊತೆ ತೆರೆಹಂಚಿಕೊಂಡಿದ್ದ ನಟಿ ಅನುಷ್ಕಾ, ತಮಗೆ ಬೇಡಿಕೆ ಇರುವಾಗಲೇ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಜೊತೆ ಹಸೆಮಣೆ (Wedding) ಏರಿದ್ದರು. ಮದುವೆಯ ನಂತರವೂ ಸಿನಿಮಾದಲ್ಲಿ ನಟಿ ಅಭಿನಯಿಸಿದ್ದರು. ಆದರೆ ಮಗಳ ಜನನ ನಂತರ ಕೊಂಚ ಅನುಷ್ಕಾ ತೆರೆಮರೆಗೆ ಸರಿದರು. ಮಗಳ ಆರೈಕೆಯಲ್ಲಿ ಬ್ಯುಸಿಯಾದರು. ಇದನ್ನೂ ಓದಿ:‘ಮೇಮ್ ಫೇಮಸ್’ ಮೆಚ್ಚಿದ ರಾಜಮೌಳಿ : ಲಹರಿ ಫಿಲ್ಮ್ಸ್ ನಿರ್ಮಾಣದ ತೆಲುಗಿನ 2ನೇ ಚಿತ್ರವೂ ಹಿಟ್

ಈಗ ಮತ್ತೆ ಸಿನಿಮಾ- ಕುಟುಂಬ ಎರಡನ್ನು ನಿಭಾಯಿಸುತ್ತಾ ಆಕ್ಟೀವ್ ಆಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಯಾಕೆ ಹೆಚ್ಚು ಸಿನಿಮಾಗಳನ್ನ ಒಪ್ಪಿಕೊಳ್ಳಲ್ಲ ಎಂದು ನಟಿ ಮಾತನಾಡಿದ್ದಾರೆ. ಪುತ್ರಿ ವಮಿಕಾ (Vamika) ಇನ್ನೂ ಚಿಕ್ಕವಳು, ಅವಳಿಗೆ ನನ್ನ ಸಮಯ ಹೆಚ್ಚು ಕೊಡಬೇಕಾಗುತ್ತದೆ. ವಿರಾಟ್ ಶೇಷ್ಠ ತಂದೆ, ಮಗಳಿಗಾಗಿ ಸಮಯ ಮೀಸಲಿಡುತ್ತಾರೆ. ಮಗಳಿಗೆ ನನ್ನ ಅಗತ್ಯ ಹೆಚ್ಚಿದೆ. ಹಾಗಾಗಿ ವರ್ಷಕ್ಕೆ ಒಂದಕ್ಕಿಂತ ಹೆಚ್ಚು ಸಿನಿಮಾ ಮಾಡೋಕೆ ನಾನು ಇಷ್ಟ ಪಡೋದಿಲ್ಲ ಎಂದು ನಟಿ ಮಾತನಾಡಿದ್ದಾರೆ. ಅನುಷ್ಕಾ ನಡೆಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ.

ಇದೀಗ ಅನುಷ್ಕಾ ಸಹೋದರನ ನಿರ್ಮಾಣದಲ್ಲಿ ಹೊಸ ವೆಬ್ ಸೀರಿಸ್‌ವೊಂದು ಮೂಡಿ ಬರಲಿದೆ. ಸಮಂತಾ- ಅನುಷ್ಕಾ ಒಟ್ಟಿಗೆ ನಟಿಸಲಿದ್ದಾರೆ. ಈ ಬಗ್ಗೆ ಇತ್ತೀಚಿಗೆ ಬಿಗ್ ಅಪ್‌ಡೇಟ್ ನೀಡಲಾಗಿತ್ತು.