ಬೋಲ್ಡ್ ಅವತಾರ ತಾಳಿದ ಶ್ರುತಿ ಹಾಸನ್

‘ಸಲಾರ್’ (Salaar) ಬ್ಯೂಟಿ ಶ್ರುತಿ ಹಾಸನ್ (Shruti Haasan) ಅವರು ಸದ್ಯ ಕಾನ್ ಫೆಸ್ಟಿವಲ್‌ನಲ್ಲಿ (Cannes Festival 2023) ಪಾಲ್ಗೊಂಡಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ:‘ಕೊರಗಜ್ಜ’ ಸಿನಿಮಾಗೆ ಬಾಲಿವುಡ್ ನಟ ಕಬೀರ್ ಬೇಡಿ ಕನ್ನಡದಲ್ಲಿ ಡಬ್ಬಿಂಗ್

ತೆಲುಗು- ತಮಿಳಿನ ಸೂಪರ್ ಸ್ಟಾರ್‌ಗಳಿಗೆ ನಾಯಕಿಯಾಗುವ ಮೂಲಕ ಶ್ರುತಿ ಹಾಸನ್ ಚಿತ್ರರಂಗದಲ್ಲಿ ಮೋಡಿ ಮಾಡ್ತಿದ್ದಾರೆ. ಸಾಲು ಸಾಲು ಬಂಪರ್ ಆಫರ್‌ಗಳು ಅವರ ಕೈಯಲ್ಲಿದೆ. ನಟಿ, ಗಾಯಕಿಯಾಗಿ ಕಮಲ್ ಪುತ್ರಿ ಗುರುತಿಸಿಕೊಂಡಿದ್ದಾರೆ.

 

View this post on Instagram

 

A post shared by Shruti Haasan (@shrutzhaasan)

ಫ್ರಾನ್ಸ್‌ನಲ್ಲಿ ಕಾನ್ ಫೆಸ್ಟಿವಲ್ ಮೇ 16ರಿಂದ ಶುರುವಾಗಿ ಮೇ 27ರವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾರಾ ಅಲಿ ಖಾನ್, ಐಶ್ವರ್ಯ ರೈ, ಇಶಾ ದತ್ತ್, ಅದಿತಿ ರಾವ್ ಹೈದರಿ (Aditi Rao Hydari) ಸೇರಿದಂತೆ ಹಲವು ನಟಿಮಣಿಯರು ರೆಡಿ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ.

 

View this post on Instagram

 

A post shared by Shruti Haasan (@shrutzhaasan)

ಇದೀಗ ಕಾನ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ, ಕಪ್ಪು ಬಣ್ಣದ ಹೂವಿನ ಡ್ರೆಸ್ ಧರಿಸಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಶ್ರುತಿ ಲುಕ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಸಲಾರ್ ಸುಂದರಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.