ಗ್ಯಾರಂಟಿ ಯೋಜನೆ ವಿರುದ್ದ ಟೀಕೆ – ಪೋಸ್ಟ್‌ ಹಂಚಿಕೊಂಡಿದ್ದ ಶಿಕ್ಷಕ ಅಮಾನತು

ಚಿತ್ರದುರ್ಗ: ರಾಜ್ಯಕ್ಕಾಗಿ ಸಿಎಂಗಳು ಮಾಡಿದ ಸಾಲ ಎಂದು ಸರ್ಕಾರದ ಗ್ಯಾರಂಟಿ ಯೋಜನೆ (Congress Guarantee) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು (Teacher) ಅಮಾನತುಗೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕಾನುಬೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಾಂತಮೂರ್ತಿ ಅಮಾನತುಗೊಂಡಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಜಾರಿ ಯಾವಾಗ? – ಗೊಂದಲದಲ್ಲಿ ಮತದಾರ, ಬಿಲ್‌ ಕಟ್ಟಿ ಎನ್ನುತ್ತಿದೆ ಬೆಸ್ಕಾಂ

ಶಿಕ್ಷಕನ ನಡೆಯಿಂದ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಮುಜುಗರ ತಂದಿದೆ. ಹೀಗಾಗಿ ಡಿಡಿಪಿಐ ರವಿಶಂಕರ್‌ರೆಡ್ಡಿ‌ ನಿರ್ದೇಶನದ ಮೇರೆಗೆ ಶಿಕ್ಷಕ ಶಾಂತ ಮೂರ್ತಿಯನ್ನು ಅಮಾನತುಗೊಳಿಸಿ (Suspended) ಹೊಸದುರ್ಗ ಬಿಇಓ ಜಯಪ್ಪ ಆದೇಶ ಪ್ರಕಟಿಸಿದ್ದಾರೆ.  ಇದನ್ನೂ ಓದಿ: ತಡವಾಗಿ ಬಂದ ಸಹಾಯಕ ಆಯುಕ್ತ – ಸಭೆಯಿಂದಲೇ ಹೊರಕಳುಹಿಸಿದ ರಾಯಚೂರು ಡಿಸಿ

 

ಪೋಸ್ಟ್‌ನಲ್ಲಿ ಏನಿತ್ತು?
ಸಿಎಂಗಳು ಮಾಡಿದ ಸಾಲ ಪಟ್ಟಿ ಇರುವ ಪೋಸ್ಟ್‌ ಒಂದನ್ನು ಒಬ್ಬರು ಹಂಚಿಕೊಂಡಿದ್ದರು. ಈ ಪೋಸ್ಟ್‌ನಲ್ಲಿ ಎಸ್‌ಎಂ ಕೃಷ್ಣ, ಧರಂ ಸಿಂಗ್‌, ಎಚ್‌ಡಿ ಕುಮಾರಸ್ವಾಮಿ, ಸದಾನಂದ ಗೌಡ, ಜಗದೀಶ್‌ ಶೆಟ್ಟರ್‌ ಸಿದ್ದರಾಮಯ್ಯನವರ ಅವಧಿ ಸಾಲದ ಮಾಹಿತಿ ನೀಡಲಾಗಿತ್ತು. ಸಿದ್ದರಾಮಯ್ಯನವರ ಅವಧಿಯಲ್ಲಿ 2,42,000 ಕೋಟಿ ರೂ. ಸಾಲ ಮಾಡಲಾಗಿದೆ. ಸಿದ್ದರಾಮಯ್ಯ ಮಾಡಿದ್ದ ಸಾಲ 2,42,000 ಕೋಟಿ ರೂ. ಬಿಟ್ಟಿ ಭಾಗ್ಯ ಕೊಡದೇ ಇನ್ನೇನು ಎಂದು ಬರೆಯಲಾಗಿತ್ತು. ಈ ಪೋಸ್ಟನ್ನು ಶಾಂತಮೂರ್ತಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.