ಲವರ್‌ಗಾಗಿ ಕವಿತೆ ಬರೆದ ‘ಗಟ್ಟಿಮೇಳ’ ನಟಿ ನಿಶಾ? ಹುಡುಗ ಯಾರು?

ಕಿರುತೆರೆಯ ಜನಪ್ರಿಯ ನಟಿ ನಿಶಾ ರವಿಕೃಷ್ಣನ್ (Nisha Ravikrishnan) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಸೈಲೆಂಟ್ ಆಗಿ ‘ಗಟ್ಟಿಮೇಳ’ (Gatimela) ನಟಿ ಎಂಗೇಜ್ ಆಗಿದ್ದಾರೆ. ಈ ಕುರಿತ ನಟಿಯ ಪೋಸ್ಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಟಿವಿ ಪರದೆಯಲ್ಲಿ ಅಮೂಲ್ಯ ಎಂದೇ ಫೇಮಸ್ ಆಗಿರುವ ವೇದಾಂತ್‌ನ ಅರಗಿಣಿ ನಿಶಾ ರವಿಕೃಷ್ಣನ್ ಅವರು ‘ಗಟ್ಟಿಮೇಳ’ ಮತ್ತು ತೆಲುಗು ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ‘ಇಷ್ಟಕಾಮ್ಯ’ (Istakamya) ಸಿನಿಮಾದಲ್ಲಿ ಬ್ಯಾಕ್ ಡ್ಯಾನ್ಸರ್ ಆಗಿದ್ದ ನಿಶಾ, ಬಳಿಕ ‘ಸರ್ವ ಮಂಗಳ ಮಾಂಗಲ್ಯೇ’ ಸೀರಿಯಲ್‌ನಲ್ಲಿ ಹೀರೋ ತಂಗಿ ಪಾತ್ರದಲ್ಲಿ ಗುರುತಿಸಿಕೊಂಡರು. ಬಳಿಕ ‘ಗಟ್ಟಿಮೇಳ’ ಸೀರಿಯಲ್ಲಿ ನಾಯಕಿಯಾಗಿ ಮಿಂಚ್ತಿದ್ದಾರೆ.

ನಟಿ ನಿಶಾ ಅವರು ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಚೆಂದದ ಅಡಿಬರಹ ನೀಡುವ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಸೈಲೆಂಟ್ ಆಗಿ ನಿಶಾ ಎಂಗೇಜ್ (Engage) ಆದ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡ್ತಿದೆ. ಇದನ್ನೂ ಓದಿ:ಬಾಕ್ಸ್ ಆಫೀಸ್ ಬಾಚುತ್ತಿರುವ ದಿ ಕೇರಳ ಸ್ಟೋರಿ : 7 ದಿನಕ್ಕೆ ₹80 ಕೋಟಿ ಕಲೆಕ್ಷನ್

ನಿಶಾ ಅವರು ತಮ್ಮ ಫೋಟೋ ಜೊತೆಗೆ ‘ನನ್ನ ಎದೆಯ ಬೀದಿಯಲಿ ಹೊಂಗನಸ ವ್ಯಾಪಾರಿ ನೀ’ ಎಂದು ಅಡಿಬರಹ ನೀಡಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ  ‘ಜೀವನ ಹೂಬನ ಚಂದ ಈಗ ನಿನ್ನಿಂದ’ ಎಂದು ಬರೆದುಕೊಂಡಿದ್ದಾರೆ. ಈಗ ಅಭಿಮಾನಿಗಳು  ‘ಆ ಹೊಂಗನಸ ವ್ಯಾಪಾರಿ ಯಾರು..? ಯಾರಿಂದ ಚೆಂದ’ ಎಂದು ಕೇಳಿದ್ದಾರೆ. ಇನ್ನೂ ಕೆಲವರು ನಿಶಾ ಅವರ ಸಾಲುಗಳಿಗೆ ಸೋತು ಅವರೂ ಕವಿ ಆಗಿದ್ದಾರೆ. ನಿಶಾಳನ್ನು ಗೊಂಬೆ ಎಂದು ಕರೆದು ಖುಷಿಪಟ್ಟಿದ್ದಾರೆ. ಸುಮ್ನೆ ಏನೇನೋ ಊಹಿಸಿಕೊಳ್ಳಬೇಡಿ ಎನ್ನುತ್ತಿದ್ದಾರೆ ಒಟ್ನಲ್ಲಿ ನಿಶಾ ಅವರು ಪ್ರೀತಿಯಲ್ಲಿ ಬಿದ್ದಿದ್ದಾರಾ? ಎಂಬ ಅನುಮಾನ ಶುರುವಾಗಿದೆ. ಆದರೆ, ಈ ಅನುಮಾನಗಳಿಗೆ ನಿಶಾ ಅವರೇ ಉತ್ತರ ನೀಡಬೇಕಿದೆ.