ಬಹುಕಾಲದ ಗೆಳತಿ ಸ್ನೇಹಾ ಜೊತೆ ‘ಗುಳ್ಟು’ ನಿರ್ದೇಶಕನ ಎಂಗೇಜ್‌ಮೆಂಟ್

ಸ್ಯಾಂಡಲ್‌ವುಡ್‌ನಲ್ಲಿ (Sandalwood) ‘ಗುಳ್ಟು’ (Gultoo Film) ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಜನಾರ್ಧನ್ ಚಿಕ್ಕಣ್ಣ ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಬಹುಕಾಲದ ಗೆಳತಿ ಸ್ನೇಹಾ ಜೊತೆ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ (Janardhan Chikanna) ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತಾ ಜೊತೆ ಜೆಕೆ ಎಂಗೇಜ್

ನವೀನ್ ಶಂಕರ್- ಸೋನು ಗೌಡ ನಟನೆಯ ‘ಗುಳ್ಟು’ ಸಿನಿಮಾ ಜನಾರ್ಧನ್ ಚಿಕ್ಕಣ್ಣ ಪರಿಕಲ್ಪನೆಯಲ್ಲಿ ಅದ್ಭುತವಾಗಿ ಮೂಡಿ ಬಂದಿತ್ತು. ಕಥೆಗೆ ಕಲಾವಿದರ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

ಇದೀಗ ಹಲವು ವರ್ಷಗಳ ತಮ್ಮ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದಾರೆ. ಸ್ನೇಹಾ (Sneha) ಜೊತೆ ಅಧಿಕೃತವಾಗಿ ಎಂಗೇಜ್ (Engagement) ಆಗಿದ್ದಾರೆ. ಈ ಕುರಿತು ನಿರ್ದೇಶಕ ಜನಾರ್ಧನ್ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಿಳಿಸಿದ್ದಾರೆ. ಸದ್ಯದಲ್ಲೇ ಜನಾರ್ಧನ್- ಸ್ನೇಹಾ ಜೋಡಿ ದಾಂಪತ್ಯ ಬದುಕಿಗೆ ಕಾಲಿಡಲಿದ್ದಾರೆ. ನಟ ನವೀನ್, ಸೋನು ಗೌಡ, ಸಿಂಪಲ್ ಸುನಿ ಸೇರಿದಂತೆ ಹಲವರು ಈ ಜೋಡಿಗೆ ಶುಭಹಾರೈಸಿದ್ದಾರೆ.