ರಾಹುಲ್ ಗಾಂಧಿ ಯಂಗ್‌ಸ್ಟರ್ – ಹೆಚ್.ಡಿ.ದೇವೇಗೌಡ

ಬೆಂಗಳೂರು: ರಾಹುಲ್ ಗಾಂಧಿ (Rahul Gandhi) ಯಂಗ್‌ಸ್ಟರ್. ಅವರು ಬೇಕಾದರೆ ಏನಾದರೂ ಮಾತನಾಡಲಿ ಎಂದು ಜೆಡಿಎಸ್ (JDS) ವರಿಷ್ಠ ಹೆಚ್.ಡಿ.ದೇವೇಗೌಡ (H.D.Deve gowda) ಹೇಳಿದರು.

ಜೆಡಿಎಸ್ ಕಾಂಗ್ರೆಸ್‌ನ (Conrgess) ‘ಬಿ’ ಟೀಂ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕಳೆದ ಬಾರಿ ರಾಹುಲ್ ಗಾಂಧಿ ಜೆಡಿಎಸ್‌ ಬಿಜೆಪಿಯ ‘ಬಿ’ ಟೀಂ ಎಂದು ಹೇಳಿದ್ದರು. ಈ ಬಾರಿ ಮೋದಿ ಅವರು ಹೇಳಿದ್ದಾರೆ. ಮೋದಿ ಅವರು ಎತ್ತರಕ್ಕೆ ಬೆಳೆದ ನಾಯಕ. ಅವರು ಹಾಗೆ ಮಾತಾಡೋದು ಸರಿನಾ? ಅವರಿಗೆ ಬಿಡ್ತೀನಿ. ರಾಹುಲ್ ಗಾಂಧಿ ಯಂಗ್‌ಸ್ಟರ್, ಅವರು ಬೇಕಾದ್ರೆ ಏನಾದ್ರು ಮಾತಾಡಲಿ. ಮೋದಿ ಅವರು ಹಾಗೆ ಹೇಳಿದ್ದನ್ನು ಅವರಿಗೆ ಬಿಡ್ತೀನಿ. ನಾನೇನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೋಮಣ್ಣಗೆ ಲೋ ಬಿಪಿ

ಮಾಡಿದ್ದಾರೆ ಇಡೀ ರಾಷ್ಟ್ರಕ್ಕೆ ಗೊತ್ತು. ನಾನು ಏನೇನು ಮಾಡಿದ್ದೇನೆ ಅಂತ ಪುಸ್ತಕ ಬಂದಿದೆ. ಹಲವಾರು ವಿಷಯ ಅದರಲ್ಲಿ ಇದೆ. ಮುಸ್ಲಿಂ ಮೀಸಲಾತಿ, ಮಹಿಳೆಯರ ಮೀಸಲಾತಿ, ವಾಲ್ಮೀಕಿ ಮೀಸಲಾತಿ, ಈದ್ಗಾ ವಿಚಾರ ಏನೇನು ಮಾಡಿದ್ದೇನೆ ನೋಡಲಿ. ದೊಡ್ಡವರ ಹೇಳಿದ್ದಾರೆ ಹೇಳಲಿ. ಅವರ ಬಗ್ಗೆ ನಾನು ಟೀಕೆ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.

ಜೆಡಿಎಸ್‌ಗೆ ಹಾಕೋ ಒಂದೊಂದು ವೋಟು ಕಾಂಗ್ರೆಸ್‌ಗೆ ಹಾಕಿದಂತೆ ಅನ್ನೋ ಮೋದಿ ಹೇಳಿಕೆ ಕುರಿತು ಮಾತನಾಡಿ, ಮೋದಿ ಅವರು ಹಾಗೆ ಹೇಳಲು ಅಧಿಕಾರ ಇದೆ. ಸ್ವಾತಂತ್ರ‍್ಯ ಇದೆ ಹೇಳಲಿ. ಮಾತಾಡೋಕೆ ಸ್ವಾತಂತ್ರ‍್ಯ ಇದೆ, ಮಾತಾಡಲಿ ಸಂತೋಷ. ರಾಜ್ಯಕ್ಕೆ ಪದೇ ಪದೇ ಮೋದಿ ಬರುವುದರಿಂದ ನಮಗೇನು ತೊಂದರೆ ಇಲ್ಲ. ಆನಂದವಾಗಿ ಅವರು ರಾಜ್ಯಕ್ಕೆ ಬರಲಿ. ಚುನಾವಣೆ ಮುಗಿಯೋವರೆಗೂ ಬರಲಿ. ಚುನಾವಣೆ ಮುಗಿದ ಮೇಲೂ ಲೋಕಸಭೆ ಚುನಾವಣೆಗೂ ಬರಲಿ. ನಮಗೇನು ತೊಂದರೆ ಇಲ್ಲ. ಮೋದಿ ನನಗಿಂತ ಯಂಗ್ ಇದ್ದಾರೆ. ನನಗೂ ಅವರಿಗೂ 15 ವರ್ಷ ವ್ಯತ್ಯಾಸ ಇದೆ. ಕರ್ನಾಟಕದ ಮಹಾ ಜನತೆಯ ಸಮಸ್ಯೆ ಬಗೆಹರಿಸೋಕೆ ಅವರು ಬಂದರೆ ನನಗೆ ಸಂತೋಷ ಎಂದು ಕುಟುಕಿದರು. ಇದನ್ನೂ ಓದಿ: ಸಾ.ರಾ. ಬಾಸ್‌ಗೆ ದೇಶ ಕಾಯುವ ಸೈನಿಕನಿಂದ ಮೊದಲ ಮತ – ವೋಟ್‌ ಹಾಕಿ ಬ್ಯಾಲೆಟ್‌ ಪೇಪರ್‌ ಪ್ರದರ್ಶಿಸಿದ ಯೋಧನ ಫೋಟೋ ವೈರಲ್‌

ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರೋದಿಲ್ಲ. ಜೆಡಿಎಸ್ ಜೊತೆ ಮೈತ್ರಿ ಇಲ್ಲ ಎಂಬ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ದೇವೇಗೌಡರು ನಿರಾಕರಿಸಿದರು.