ಧಮ್‌ ಇದ್ರೆ ನನ್‌ ಬಗ್ಗೆ ಒಂದು ಮಾತಾಡಲಿ; ಮನೆಗೆ ನುಗ್ತೀನಿ – ಬಿಜೆಪಿ ಸಚಿವರೊಬ್ಬರ ವಿರುದ್ಧ ನಾಲಿಗೆ ಹರಿಬಿಟ್ಟ ಜಮೀರ್‌

ಚಿಕ್ಕಬಳ್ಳಾಪುರ: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವ್ಯಂಗ್ಯವಾಡಿದ್ದ ಬಿಜೆಪಿ ಸಚಿವರೊಬ್ಬರನ್ನು ಟೀಕಿಸೋ ಭರದಲ್ಲಿ ಶಾಸಕ ಜಮೀರ್‌ ಅಹ್ಮದ್‌ (Jameer Ahmed) ನಾಲಿಗೆ ಹರಿಬಿಟ್ಟಿದ್ದಾರೆ.

ಚಿಕ್ಕಬಳ್ಳಾಪುರ (Chikkaballapura) ನಗರದ ನಕ್ಕಲಕುಂಟೆ ಬಡಾವಣೆಯಲ್ಲಿ ಮತಯಾಚನೆ ವೇಳೆ ಸಚಿವ ಡಾ. ಕೆ.ಸುಧಾಕರ್‌ (Sudhakar) ವಿರುದ್ಧ ಜಮೀರ್‌ ವಾಗ್ದಾಳಿ ನಡೆಸಿದ್ದಾರೆ. “ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯ ಮಾಡಿದ್ದಲ್ಲ. ಧಮ್‌ ಇದ್ರೆ ನನ್ನ ಮೇಲೆ ಒಂದು ಮಾತು ಮಾತಾಡಲಿ. ಮನೆಗೆ ನುಗ್ಲಿಲ್ಲ ಅಂದ್ರೆ ನನ್ನ ಹೆಸರು ಜಮೀರ್‌ ಅಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕುಟುಂಬದ ನಡುವೆ ಬೇರೆ ಒಂದು ಮುಖವಿರಲಿ ಎಂದು ಇಬ್ರಾಹಿಂಗೆ ಮಣೆ: ಈಶ್ವರಪ್ಪ ವ್ಯಂಗ್ಯ

ನಕ್ಕಲಕುಂಟೆ ಬಡಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಜಮೀರ್‌ ಪ್ರಚಾರ ನಡೆಸುತ್ತಿದ್ದರು. ಪ್ರಚಾರದ ವೇಳೆ ಈ ಹೇಳಿಕೆ ನೀಡಿದ್ದಾರೆ.

ಇದೇ ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ರಾಜಕೀಯ ನಾಯಕರು ಪರಸ್ಪರ ವಾಕ್ಸಮರ ನಡೆಸುತ್ತಿದ್ದಾರೆ. ರಾಜಕೀಯ ವಿಚಾರವಾಗಿ ಒಬ್ಬರಿಗೊಬ್ಬರು ಟೀಕಾಪ್ರಹಾರ ನಡೆಸುತ್ತಿದ್ದಾರೆ. ಇದನ್ನೂ ಓದಿ: `ಮೋದಿ ವಿಷ ಸರ್ಪ, ಸೋನಿಯಾ ವಿಷಕನ್ಯೆ’ ಹೇಳಿಕೆ – ಖರ್ಗೆ, ಯತ್ನಾಳ್ ವಿರುದ್ಧ ದೂರು