ಟಿಕೆಟ್ ಮಾರಿಕೊಂಡ ವೀಡಿಯೋ ಇದ್ರೆ, ತಲೆ ಬೋಳಿಸಿಕೊಂಡು ರಾಜೀನಾಮೆ ನೀಡುತ್ತೇನೆ: ಅಶೋಕ್ ಖೇಣಿ

ಬೀದರ್: ಟಿಕೆಟ್ ಮಾರಿಕೊಂಡ ವೀಡಿಯೋ ಇದ್ದರೆ ನಾನು ತಲೆ ಬೋಳಿಸಿಕೊಂಡು ರಾಜೀನಾಮೆ ನೀಡುತ್ತೇನೆ ಎಂದು ಅಶೋಕ್ ಖೇಣಿ (Ashok Kheny) ಗರಂ ಆಗಿದ್ದಾರೆ.

ಬೀದರ್‌ನಲ್ಲಿ (Bidar) ನಾಮಪತ್ರ (Nomination) ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಟಿಕೆಟ್ ಮಾರಿಕೊಂಡಿದೆ ಎಂಬ ಚಂದ್ರಾಸಿಂಗ್ (Chandra Singh) ಆರೋಪಕ್ಕೆ ತೀರುಗೇಟು ನೀಡಿದ್ದಾರೆ. ನಾನು ಟಿಕೆಟ್ ಖರೀದಿ ಮಾಡುವ ಸ್ವಭಾವದವನಲ್ಲ. ನನಗೆ ಟಿಕೆಟ್ ಸಿಕ್ಕಿದ್ದಕ್ಕೆ ಚಂದ್ರಾಸಿಂಗ್ ಬೇಸರಗೊಂಡಿದ್ದಾರೆ. ಅವರ ಜೊತೆ ಮಾತನಾಡಿ ಸಮಾಧಾನ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವ ನಾಮಪತ್ರ ಸಲ್ಲಿಕೆ ವೇಳೆ ಭಿನ್ನಮತ ಸ್ಪೋಟ – ಮಾಜಿ ಶಾಸಕಿ ಮನೆಗೆ ತೆರಳಿ ಸ್ಪರ್ಧೆಗೆ ಒತ್ತಾಯಿಸಿದ ಕಾರ್ಯಕರ್ತರು

ನಾನು ಯಾರಿಗೆ ಬೀದರ್‌ನ್ನು ಸಿಂಗಾಪುರ್ ಮಾಡುತ್ತೇನೆ ಎಂದು ಹೇಳಿದ್ದೇನೆ? ಅವರನ್ನು ತೋರಿಸಿ ನಾನು ಒಂದು ಕೋಟಿ ಕೊಡುತ್ತೇನೆ. ತೋರಿಸಲು ಸಾಧ್ಯವಾಗದೇ ಇದ್ದರೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಸವಾಲು ಹಾಕಿದ್ದಾರೆ. ಕೆಲವರು ಟಿಆರ್‌ಪಿಗಾಗಿ ಈ ರೀತಿ ಮಾಡುತ್ತಿದ್ದಾರೆ. ಇದು ತಪ್ಪು ಎಂದು ಮಾಧ್ಯಮಗಳ ವಿರುದ್ಧ ಸಿಟ್ಟಾಗಿದ್ದಾರೆ. ಇದನ್ನೂ ಓದಿ: ಪುತ್ರನ ನಾಮಪತ್ರ ಸಲ್ಲಿಸಲು ತನ್ನ ಹಳೆಯ ಅಂಬಾಸಿಡಾರ್ ಕಾರಿನಲ್ಲಿ ಪ್ರಯಾಣಿಸಿದ ಯಡಿಯೂರಪ್ಪ