ಸಹಸ್ರಾರು ಮಂದಿ ಸಮೇತ ಸಚಿವ ಸುಧಾಕರ್ ಇಂದು ನಾಮಪತ್ರ ಸಲ್ಲಿಕೆ – ನಾಮಿನೇಷನ್‌ಗೂ ಮುನ್ನ ಟೆಂಪಲ್‌ ರನ್

ಚಿಕ್ಕಬಳ್ಳಾಪುರ: ಕಳೆದ ಗುರುವಾರ ಕುಟುಂಬ ಸಮೇತ ಸರಳವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದ ಸಚಿವ ಸುಧಾಕರ್ (Sudhakar) ನಗರದಲ್ಲಿ ಸಹಸ್ರಾರು ಮಂದಿ ಬೆಂಬಲಿಗರೊಂದಿಗೆ ಬೃಹತ್ ರೋಡ್ ಶೋ ನಡೆಸುವ ಮೂಲಕ ಅಧಿಕೃತವಾಗಿ ಬಿ ಫಾರಂ ಸಮೇತ ಸೋಮವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಕಳೆದ‌ ಗುರುವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ನೇರವಾಗಿ ಆಗಮಿಸಿ ನಾಮಿನೇಷನ್ ಮಾಡಿದ್ರು.‌ ಇಂದು ನಾಮಪತ್ರ ಸಲ್ಲಿಕೆಗೂ ಮುನ್ನ ಸಚಿವ ಸುಧಾಕರ್ ಟೆಂಪಲ್ ರನ್ ನಡೆಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಹೆಮ್ಮೆ.. ನಂದಿನಿಯೇ ಬೆಸ್ಟ್ ಎಂದ ರಾಹುಲ್ ಗಾಂಧಿ

ಚಿಕ್ಕಬಳ್ಳಾಪುರ (Chikkaballapura) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಡಾ.ಕೆ.ಸುಧಾಕರ್ ಇಂದು ಮೊದಲು ಮನೆಯಲ್ಲೇ ದೇವರ ಪೂಜೆ ಮಾಡಿ ನಂತರ ತಾಯಿ ಪೋಟೋಗೆ ನಮನ ಸಲ್ಲಿಸಿದರು. ಇದಾದ ನಂತರ ಚಿಕ್ಕಪ್ಯಾಯಲಗುರ್ಕಿಯ ತಮ್ಮ ಮನೆ ದೇವ್ರು ಚನ್ನಕೇಶವಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯಕ್ಕೆ ಹೋಗಿ ಪೂಜೆ ಪುನಸ್ಕಾರ ಮಾಡಿದರು.

ಇದಾದ ನಂತರ ಸೂಲಾಲಪ್ಪನದಿನ್ನೆ ಬಳಿಯ ಬಿಜಿಎಸ್ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಶ್ರೀ ಮಂಗಳಾನಂದನಾಥ ಸ್ವಾಮಿಗಳ ಆಶೀರ್ವಾದ ಪಡೆಯಲಿದ್ದಾರೆ. ಇನ್ನೂ ಜಾಲಾರಿ ಲಕ್ಷ್ಮಿ ನರಸಿಂಹಸ್ವಾಮಿ, ರಂಗಸ್ಥಳ ರಂಗನಾಥ ಸ್ವಾಮಿ, ಕಾಡದಿಬ್ಬೂರು ನರಸಿಂಹಸ್ವಾಮಿ, ಚಿಕ್ಕಬಳ್ಳಾಪುರ ನಗರದ ಕೈವಾರ ತಾತಯ್ಯನ ದೇವಾಲಯ, ಅಂಬೇಡ್ಕರ್ ಹಾಗೂ ಕೆಂಪೇಗೌಡರ ಪ್ರತಿಮೆಗಳಿಗೆ ಮಾಲಾರ್ಪಣೆ. ನಂತರ ವಾಪಸಂದ್ರ ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ಪೂಜೆ ಸಲ್ಲಸಲಿದ್ದಾರೆ. ಇದಾದ‌ ನಂತರ ಚಿಕ್ಕಬಳ್ಳಾಪುರ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿ ತಮ್ಮ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಶೆಟ್ಟರ್‌ ಜೊತೆ ‘ಕೈ’ ನಾಯಕರ ಹೈವೋಲ್ಟೇಜ್‌ ಮೀಟಿಂಗ್‌; ಹು-ಧಾ ಸೆಂಟ್ರಲ್‌ನಿಂದ ಸ್ಪರ್ಧೆಗೆ ಸುರ್ಜೇವಾಲ ಆಫರ್‌