ವರುಣಾದಲ್ಲಿ ಅಪ್ಪ-ಮಗನ ದರ್ಬಾರ್‌ಗೆ ಅಂತ್ಯ ಕಾಲ ಬಂದಿದೆ: ಪ್ರತಾಪ್ ಸಿಂಹ

ಮೈಸೂರು: ವರುಣಾದಲ್ಲಿ (Varuna) 15 ವರ್ಷಗಳ ಅಪ್ಪ ಮಗನ ದರ್ಬಾರ್‌ಗೆ ಅಂತ್ಯ ಕಾಲ ಬಂದಿದೆ. ಬಿಜೆಪಿ (BJP) ಅಭ್ಯರ್ಥಿ ಸೋಮಣ್ಣನವರಿಗೆ (V.Somanna) ಒಳ್ಳೆಯ ಅಭಿಪ್ರಾಯವಿದೆ. ಹಳೆ ಮೈಸೂರು ಭಾಗದಲ್ಲಿ 8ರಿಂದ 10 ಸ್ಥಾನ ಬಿಜೆಪಿಗೆ ಬರುತ್ತದೆ ಎಂದು ಸಂಸದ ಪ್ರತಾಪ್ ಸಿಂಹ (Prathap Simha) ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ (Mysuru) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬರಲು ದೇಶದ್ರೋಹಿಗಳ ಜೊತೆ ಕಾಂಗ್ರೆಸ್ ಕೈಜೋಡಿಸುತ್ತಿದೆ. ಪಿಎಫ್‌ಐ (PFI), ಕೆಎಫ್‌ಡಿ (KFD) ಹಾಗೂ ಎಸ್‌ಡಿಪಿಐ (SDPI) ಸಂಘಟನೆಯ ಕಾರ್ಯಕರ್ತರು ಸಿದ್ದರಾಮಯ್ಯನವರಿಗೆ ದತ್ತು ಮಕ್ಕಳಿದ್ದಂತೆ. ಪಿಎಫ್‌ಐ ಮತ್ತು ಕೆಎಫ್‌ಡಿಯನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (D.K.Shivakumar) ಅವರು ಕರ್ನಾಟಕದಲ್ಲಿ ತಾಲಿಬಾನ್ (Taliban) ಸರ್ಕಾರ ತರಲು ಹೊರಟಿದ್ದಾರೆ. ಸಮಾಜಘಾತುಕ ಸಂಘಟನೆಯ ಬೆಂಬಲದೊಂದಿಗೆ ಕಾಂಗ್ರೆಸ್ (Congress) ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ ಎಂದರು. ಇದನ್ನೂ ಓದಿ: ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡಿ ಬೇಸರವಾಗಿದೆ: ರಾಜಕೀಯ ನಿವೃತ್ತಿ ಘೋಷಿಸಿದ ವಿ.ಆರ್ ಸುದರ್ಶನ್ 

ಎಸ್‌ಡಿಪಿಐನವರು ಕಾಂಗ್ರೆಸ್‌ಗೆ ಬೆಂಬಲ ಕೊಡಬೇಕು ಎಂದು ಜಿ.ಪರಮೇಶ್ವರ್ (G.Parameshwar) ಕರೆ ಕೊಟ್ಟಿದ್ದಾರೆ. ಪಿಎಫ್‌ಐ ಮತ್ತು ಕೆಎಫ್‌ಡಿ ಸಂಘಟನೆಗಳು ಎಸ್‌ಡಿಪಿಐನ ಮಾತೃ ಸಂಸ್ಥೆಗಳು. ಅಧಿಕಾರಕ್ಕೆ ಬರುವ ಸಲುವಾಗಿ ನಿಷೇಧಿತ ಸಂಘಟನೆಯ ಬೆಂಬಲ ಕೇಳುತ್ತಿದ್ದೀರಾ? ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪಗೆ ಜಾಮೀನು 

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜಕೀಯ ಹತ್ಯೆಗಳು ಹೆಚ್ಚಾಗುತ್ತವೆ. ಸಿದ್ದರಾಮಯ್ಯನವರ ಸಾಕು ಮಕ್ಕಳಿಂದ ರಾಜ್ಯದಲ್ಲಿ ಸಾಲು ಸಾಲು ಹತ್ಯೆ ನಡೆದಿವೆ. ಕರ್ನಾಟಕವನ್ನು ಇನ್ನೊಂದು ಕೇರಳವನ್ನಾಗಿ (Kerala) ಮಾಡಲು ಹೊರಟ್ಟಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಏನು ಬೇಕಾದರು ಮಾಡುತ್ತದೆ. ನಾಳೆ ರಾಜ್ಯ ಎಸ್‌ಡಿಪಿಐ ಕೈಗೆ ಹೋದರೂ ಪರವಾಗಿಲ್ಲ ನಾವು ಅಧಿಕಾರಕ್ಕೆ ಬರಬೇಕು ಎನ್ನುವುದು ಕಾಂಗ್ರೆಸ್ ಮನಸ್ಥಿತಿ ಎಂದು ಹರಿಹಾಯ್ದರು. ಇದನ್ನೂ ಓದಿ: ಶೆಟ್ಟರ್‌ಗೆ ಟಿಕೆಟ್ ತಪ್ಪಲು ನಾನೇ ಕಾರಣ ಅನ್ನೋದು ಸುಳ್ಳು: ಬೊಮ್ಮಾಯಿ