ಸಿನಿಮಾದವರಿಗೆ ಹೆಣ್ಣು ಯಾಕೆ ಕೊಡಲ್ಲ ಎಂದು ರೇಗಾಡಿದ ಡಾಲಿ

ಟರಾಕ್ಷಸ ಡಾಲಿ (Daali) ಚಂದನವನದ ಸಕ್ಸಸ್‌ಫುಲ್ ನಟ, ನಾಯಕ, ವಿಲನ್, ನಿರ್ಮಾಪಕ, ಲಿರಿಕ್ಸ್ ರೈಟರ್ ಆಗಿ ಸೈ ಎನಿಸಿಕೊಂಡಿದ್ದಾರೆ. ಆಗಾಗ ಸಿನಿಮಾಗಿಂತ ಡಾಲಿ ಮದುವೆ ವಿಚಾರವೇ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇದೀಗ ಧನಂಜಯ ಸಿನಿಮಾದವರಿಗೆ ಹೆಣ್ಣು ಯಾಕೆ ಕೊಡಲ್ಲ ಅಂತಾ ಫುಲ್ ಗರಂ ಆಗಿದ್ದಾರೆ. ಇದನ್ನೂ ಓದಿ:ಸಿಎಂ ಬೊಮ್ಮಾಯಿ ಜೊತೆ ಕಾಣಿಸಿಕೊಂಡ ರಿಷಬ್ ಶೆಟ್ಟಿ

ಆಗಾಗ ನೆಟ್ಟಿಗರ ಬಾಯಿಗೆ ಚರ್ಚೆಯಾಗುವ ವಿಷ್ಯ ಅಂದರೆ ಡಾಲಿ – ಅಮೃತಾ ಡೇಟಿಂಗ್ ಸುದ್ದಿ. ಅದೆಷ್ಟೇ ಬಾರಿ ನಾವಿಬ್ಬರು ಫ್ರೆಂಡ್ಸ್‌ ಅಷ್ಟೇ ಎಂದು ಸ್ಪಷ್ಟನೆ ಕೊಟ್ರು ಕೂಡ ಈ ಜೋಡಿ ಹೆಸರು ತಳಕು ಹಾಕಿಕೊಳ್ಳುತ್ತಲೇ ಇರುತ್ತದೆ. ಈಗ ನಾನಿನ್ನೂ ಸಿಂಗಲ್ ನನ್ನ ಹೃದಯ ಖಾಲಿ ಇದೆ ಅಂತಿದ್ದಾರೆ ಡಾಲಿ. ಸಿನಿಮಾದವ್ರು ಅಂತಾ ಹೆಣ್ಣು ಕೊಡುತ್ತಿಲ್ಲ ಅಂದ್ರೆ ಬೇಡ ಬಿಡಯ್ಯ. ತೆರೆಯ ಮೇಲೆ 10 ಮದುವೆ ಆಗ್ತೀನಿ ಎಂದು ಡಾಲಿ ರೇಗಾಡಿದ್ದಾರೆ. ಈ ಕುರಿತ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

 

View this post on Instagram

 

A post shared by Hombale Films (@hombalefilms)

ಅಂದಹಾಗೆ ಜಗ್ಗೇಶ್ ನಟನೆಯ Raghavendra Stores ಚಿತ್ರದ ಸಿಂಗಲ್ ಸುಂದ್ರ ಎಂಬ ಸಾಂಗ್ ಏ.12ಕ್ಕೆ ರಿಲೀಸ್ ಆಗಿದೆ. ಹಾಗಾಗಿ ಸಿಂಗಲ್ ಆಗಿರುವ ಡಾಲಿ ಕಡೆಯಿಂದ ವಿಶೇಷವಾಗಿ ಅನೌನ್ಸ್‌ಮೆಂಟ್ ಮಾಡಿಸಿದ್ದಾರೆ ಸಿನಿಮಾ ಟೀಂ. ಮದುವೆಯಾಗದೇ ಸಿಂಗಲ್ ಆಗಿ ಇರೋರಿಗಾಗಿ ಈ ಹಾಡು ಮೂಡಿ ಬಂದಿದೆ. ಈ ಹಾಡನ್ನ ಸ್ಯಾಂಡಲ್‌ವುಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ Rakshit Shetty ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ನವರಸ ನಾಯಕ ಜಗ್ಗೇಶ್, ಶ್ವೇತಾ ಶ್ರೀವಾಸ್ತವ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಇದೇ ಏ.28ಕ್ಕೆ ರಿಲೀಸ್ ಆಗಲಿದೆ. ಹೊಂಬಾಳೆ ಫಿಲ್ಮ್ಸ್‌ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದೆ.