ಬೀದಿ ನಾಯಿಗಳ ದಾಳಿ – ಅಪ್ರಾಪ್ತ ಬಾಲಕ ಮೃತ್ಯು

ಲಕ್ನೋ: ಬೀದಿ ನಾಯಿಗಳು (Stary Dogs) ಹಿಂಡು ಹಿಂಡಾಗಿ 11 ವರ್ಷದ ಬಾಲಕನ ಮೇಲೆ ದಾಳಿ (Attack) ನಡೆಸಿ ಕೊಂದು ಹಾಕಿರುವ ಘಟನೆ ಉತ್ತರಪ್ರದೇಶದ (Uttar Pradesh) ಮಹಾರಾಜ್‌ಗಂಜ್‌ನ (Maharajganj) ಶಾಸ್ತ್ರಿನಗರದ ಇಂಟರ್‌ಮೀಡಿಯೇಟ್ ಕಾಲೇಜು ಮೈದಾನದಲ್ಲಿ ನಡೆದಿದೆ.

ಆದರ್ಶ್ (11) ಮೃತ ಬಾಲಕ. ಈತ ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮನೆಯಿಂದ ಮಾರುಕಟ್ಟೆಗೆ ತೆರಳಿದ್ದ. ಎಷ್ಟು ಹೊತ್ತಾದರೂ ಮನೆಗೆ ಹಿಂತಿರುಗದ ವೇಳೆ ಕುಟುಂಬಸ್ಥರು ಹುಡುಕಲು ಪ್ರಾರಂಭಿಸಿದ್ದಾರೆ. ಈ ವೇಳೆ ತಡರಾತ್ರಿಯಲ್ಲಿ ಕಚ್ಚಿದ ಗುರುತುಗಳೊಂದಿಗೆ ಆತನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮನೆ ಮುಂದೆ ನಾಯಿ ಕರೆದುಕೊಂಡು ಬಂದು ಗಲೀಜು ಮಾಡಿಸ್ತೀಯಾ ಎಂದಿದ್ದಕ್ಕೆ ವ್ಯಕ್ತಿಯ ಕೊಲೆ 

ಆತನ ಮುಖ ಮತ್ತು ಬಲಗೈ ಕಚ್ಚಿದ ಗುರುತುಗಳನ್ನು ಹೊಂದಿದ್ದು, ಬಾಲಕ ನಾಯಿಗಳ ವಿರುದ್ಧ ಸೆಣಸಾಡಿರುವಂತೆ ಕಂಡುಬಂದಿದೆ. ನಾಯಿಗಳ ಹಿಂಡು ದಾಳಿ ಮಾಡಿ ಬಾಲಕನನ್ನು ಕೊಂದು ಹಾಕಿದೆ. ಮೃತದೇಹವನ್ನು ಸ್ವಾಧೀನಪಡಿಸಿಕೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇನ್ಸ್ಪೆಕ್ಟರ್ ಕೊತ್ವಾಲಿ ರವಿ ರೈ ತಿಳಿಸಿದರು. ಇದನ್ನೂ ಓದಿ: ಮೊಬೈಲ್ ನೋಡಿದ್ದು ಸಾಕು ಎಂದಿದ್ದಕ್ಕೆ 7 ನೇ ಅಂತಸ್ತಿನಿಂದ ಜಿಗಿದು 15ರ ಬಾಲಕಿ ಆತ್ಮಹತ್ಯೆ