‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ದಿವ್ಯಾ ಸುರೇಶ್ (Divya Suresh) ಸದ್ಯ ತ್ರಿಪುರ ಸುಂದರಿ (Tripura Sundari) ಸೀರಿಯಲ್ನಲ್ಲಿ ಆಕ್ಟೀವ್ ಆಗಿದ್ದಾರೆ. ಇತ್ತೀಚಿಗೆ ತಮ್ಮ ಬಾಯ್ಫ್ರೆಂಡ್ ಜೊತೆಗಿನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಡಿದ್ದಾರೆ.
ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ನಿಂದ ಗಮನ ಸೆಳೆದ ಸ್ಪರ್ಧಿ ದಿವ್ಯಾ ಸುರೇಶ್ಗೆ ಈ ಹಿಂದೆ ರಾಕೇಶ್ ಅಡಿಗ (Rakesh Adiga) ಜೊತೆ ಎಂಗೇಜ್ ಆಗಿದ್ದರು. ಕಾರಣಾಂತರಗಳಿಂದ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಇಬ್ಬರು ತಮ್ಮ ತಮ್ಮ ಲೈಫ್ನಲ್ಲಿ ಮೂವ್ ಆನ್ ಆಗಿದ್ದಾರೆ. ಸದ್ಯ ದಿವ್ಯಾ ಅವರ ಬಾಯ್ಫ್ರೆಂಡ್ ಬರ್ತ್ಡೇಗೆ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ. ಹುಡುಗನ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನ ನಟಿ ಹಂಚಿಕೊಂಡಿಲ್ಲ. ಇದನ್ನೂ ಓದಿ: ದತ್ತಣ್ಣ ಮದುವೆ ಆಗಲಿಲ್ಲ ಏಕೆ? ಗೆಳೆಯರು ಬಿಚ್ಚಿಟ್ಟ ರಹಸ್ಯ
ಇತ್ತೀಚಿಗೆ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ‘ಹ್ಯಾಪಿ ಬರ್ತ್ಡೇ ಲವ್’ ಎಂದು ಗೆಳೆಯನಿಗೆ ದಿವ್ಯಾ ಶುಭಕೋರಿದ್ದಾರೆ. ಸದ್ಯ ಎಂಗೇಜ್ ಆಗಿರುವ ಬಗ್ಗೆ ಸುಳಿವು ನೀಡಿರುವ ನಟಿ ದಿವ್ಯಾ, ಸದ್ಯದಲ್ಲೇ ಮದುವೆ ಬಗ್ಗೆ ಕೂಡ ಗುಡ್ ನ್ಯೂಸ್ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.
ಬಿಗ್ ಬಾಸ್ ಶೋನಲ್ಲಿ ದಿವ್ಯಾ ಉರುಡುಗ, ಅರವಿಂದ್ ಕೆಪಿ, ಮಂಜು ಪಾವಗಡ ಜೊತೆ ದಿವ್ಯಾ ಸುರೇಶ್ ಕೂಡ ಸ್ಪರ್ಧಿಯಾಗಿ ಮಿಂಚಿದ್ದರು. ಕಳೆದ ವರ್ಷ ರೌಡಿ ಬೇಬಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.



