ಪತ್ನಿ, ಪುತ್ರನ ಜೊತೆ ವಿನೋದ್ ರಾಜ್? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಿರ್ದೇಶಕ

ಸ್ಯಾಂಡಲ್‌ವುಡ್‌ನಲ್ಲಿ (Sandalwood) ಡ್ಯಾನ್ಸ್‌ಗೆ ಹೆಸರುವಾಸಿಯಾಗಿದ್ದ ವಿನೋದ್ ರಾಜ್ (Vinodraj) ಕಾರಣಾಂತರಗಳಿಂದ ನಟನೆಯಿಂದ ದೂರ ಸರಿದು ತಮ್ಮ ತಾಯಿ ಲೀಲಾವತಿ ಜೊತೆ ಜೀವನ ಸಾಗಿಸುತ್ತಿದ್ದಾರೆ. ವಿನೋದ್ ರಾಜ್‌ಗೆ ಮದುವೆಯಾಗಿಲ್ಲ. ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ಫ್ಯಾನ್ಸ್‌ ಅಂದುಕೊಂಡಿದ್ದರು. ಇದೀಗ ವಿನೋದ್ ರಾಜ್‌ಗೆ ಮದುವೆಯಾಗಿ ಮಗನಿರುವ ಬಗ್ಗೆ ‘ಡಿಎನ್‌ಎ’ ಖ್ಯಾತಿಯ ನಿರ್ದೇಶಕ ಪ್ರಕಾಶ್ ಮೆಹು (Director Prakash Mehu) ಸೋಷಿಯಲ್ ಮೀಡಿಯಾದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಹಿರಿಯ ನಟಿ ಲೀಲಾವತಿ (Leelavathi) ಮತ್ತು ಅವರ ಪುತ್ರ ವಿನೋದ್‌ರಾಜ್‌ಗೆ ಸಂಬಂಧಿಸಿದಂತೆ ಸ್ಫೋಟಕ ಸುದ್ದಿಯೊಂದನ್ನು ನಿರ್ದೇಶಕ ಪ್ರಕಾಶ್ ರಾಜ್ ಮೆಹು ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ. ಇದರ ಬಗ್ಗೆ ಅಸಲಿ ಸತ್ಯವನ್ನ ಸ್ವತಃ ನಟಿ ಲೀಲಾವತಿ- ಪುತ್ರ ವಿನೋದ್ ರಾಜ್ ಅವರೇ ಬಹಿರಂಗಪಡಿಸಬೇಕಿದೆ.

ಸದ್ಯ ವಯೋಸಹಜ ಅನಾರೋಗ್ಯದಿಂದ (Health Issue) ಇರುವ ಲೀಲಾವತಿ ಅವರನ್ನು ಅವರ ಪುತ್ರ ವಿನೋದ್ ರಾಜ್ ನೋಡಿಕೊಳ್ಳುತ್ತಿದ್ದು, ಇದರ ಜೊತೆಗೆ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು ನೆಲಮಂಗಲ ಹತ್ತಿರ ನೆಲೆಸಿದ್ದಾರೆ. ವಿನೋದ್ ರಾಜ್ ಅವರಿಗೆ ಈವರೆಗೆ ಮದುವೆಯಾಗಿಲ್ಲ ಎಂದೇ ಹೇಳಲಾಗಿತ್ತು. ಅವರೇಕೆ ಇನ್ನೂ ಮದುವೆಯಾಗಿಲ್ಲ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಇದೀಗ ನಿರ್ದೇಶಕ ಪ್ರಕಾಶ್ ರಾಜ್ ಮೆಹು ತಮ್ಮ Facebook ಪುಟದಲ್ಲಿ ವಿನೋದ್ ರಾಜ್‌ಗೆ ಮದುವೆಯಾಗಿ ಓರ್ವ ಮಗನಿದ್ದಾನೆ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ವಿನೋದ್ ರಾಜ್ ಅವರಿಗೆ ಮದುವೆಯಾಗಿ ಪುತ್ರನಿದ್ದು, ಚೆನ್ನೈನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ವಿನೋದ್ ಪತ್ನಿ ಮತ್ತು ಮಗ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ. ಲೀಲಾವತಿಯವರ ಜೊತೆಗೆ ಕುಳಿತಿರುವ ಫೋಟೋವನ್ನು ಫೇಸ್‌ಬುಕ್‌ನಲ್ಲಿ ನಿರ್ದೇಶಕ ಪ್ರಕಾಶ್ ಮೆಹು ಪ್ರಕಟಿಸಿದ್ದಾರೆ. ಅದರಲ್ಲಿ ಮಹಾಲಿಂಗ ಭಾಗವತರ್ ಪತ್ನಿ ಲೀಲಾವತಿ ಅಮ್ಮಾಳ್ ಎಂದು ಬರೆದುಕೊಂಡಿದ್ದಾರೆ. ವಿನೋದ್ ಪುತ್ರನ ಹೆಸರು ಯುವರಾಜ್ ಎಂದು ಇದ್ದು, ಈ ಸಂಬಂಧ ಆತನ ಅಂಕಪಟ್ಟಿಯ ಫೋಟೋವನ್ನು ಕೂಡ ಹಾಕಿದ್ದಾರೆ. ಅದರಲ್ಲಿ ತಾಯಿ ಹೆಸರು ಅನು ಬಿ ಎಂದಿದೆ. ತಂದೆ/ಗಾರ್ಡಿಯನ್ ಜಾಗದಲ್ಲಿ ವಿನೋದ್ ರಾಜ್ ಎಂದಿದೆ.

ಕಳೆದ ಎರಡು ದಿನಗಳಿಂದ ವಿನೋದ್ ರಾಜ್ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತುದ್ದರು. ಲೀಲಾವತಿ- ವಿನೋದ್ ರಾಜ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿಚಾರ ಅದೆಷ್ಟರ ಮಟ್ಟಿಗೆ ನಿಜಾ ಎಂಬುದನ್ನ ಕಾದುನೋಡಬೇಕಿದೆ.