ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಬೇಕೆಂಬುದು ನನ್ನ ಆಸೆ: ವರ್ತೂರು ಪ್ರಕಾಶ್

ಕೋಲಾರ : ಸಿದ್ದರಾಮಯ್ಯ (Siddaramaiah) ಅವರು ಕೋಲಾರದಿಂದ (Kolar) ಸ್ಪರ್ಧೆ ಮಾಡಬೇಕೆಂದು ನನಗೆ ಬಹಳ ಆಸೆ ಇದೆ, ಅವರು ಕೋಲಾರಕ್ಕೆ ಬಂದರೆ ಕ್ಷೇತ್ರ ರಂಗೇರಲಿದೆ ಎಂದು ಮಾಜಿ ಸಚಿವ ಆರ್. ವರ್ತೂರು ಪ್ರಕಾಶ್ (Varthur Prakash) ಹೇಳಿದರು.

ಕೋಲಾರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹೈಕಮಾಂಡ್ ಬಳಿ 2 ಕಡೆ ನಿಲ್ಲುತ್ತೇನೆಂದು ಹೇಳಿದ್ದಾರೆ. ಅವರು ಕೋಲಾರಕ್ಕೆ ಬಂದರೆ ಕೋಲಾರ ಕ್ಷೇತ್ರ ರಂಗೇರುತ್ತದೆ, ಇಲ್ಲವಾದರೆ ಕೋಲಾರದಲ್ಲಿ ಜೆಡಿಎಸ್ (JDS) ಹಾಗೂ ಕಾಂಗ್ರೆಸ್ (Congress) ಸಪ್ಪೆ ಆಗಲಿದೆ ಎಂದರು. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಗಳಾದರೂ ಚುನಾವಣೆಯನ್ನು ಬಹಳ ಸಂತೋಷದಿಂದ ನಡೆಸುತ್ತೇನೆ ಎಂದು ಹೇಳಿದರು.

ಇನ್ನೂ ಏ. 5ರಂದು ರಾಹುಲ್ ಗಾಂಧಿ (Rahul Gandhi) ಕೋಲಾರಕ್ಕೆ ಬರುತ್ತಿರುವುದರ ಕುರಿತು ಮಾತನಾಡಿದ ಅವರು, ಕಾಂಗ್ರೆಸ್‌ನವರು ರಾಹುಲ್ ಗಾಂಧಿ ಅವರನ್ನು ಕರೆಸಿದರೆ, ನಾವು ಮೋದಿ ಅವರನ್ನ ಕರೆಸಿ ಕಾರ್ಯಕ್ರಮ ಮಾಡುತ್ತೇವೆ. ಕೋಲಾರಕ್ಕೆ ಸಿದ್ದರಾಮಯ್ಯ, ಖರ್ಗೆ, ಡಿ.ಕೆ.ಶಿವಕುಮಾರ್ ಅವರು ಬಂದಾಗ ಜನ ಸೇರಿಸಲು ಇವರಿಂದ ಸಾಧ್ಯವಾಗಲಿಲ್ಲ. ಇನ್ನೂ ರಾಹುಲ್ ಗಾಂಧಿ ಬಂದಾಗ ಜನ ಸೇರಿಸ್ತಾರಾ ಎಂದು ಕಾಂಗ್ರೆಸ್ ಪಕ್ಷದವರ ಕಾಲೆಳೆದರು. ರಾಹುಲ್ ಗಾಂಧಿ ಅವರ ಸಂಸತ್ ಸ್ಥಾನ ಅನರ್ಹದ ಕುರಿತು ಮಾತನಾಡಿದ ಅವರು, ಇದಕ್ಕೂ ಬಿಜೆಪಿಗೆ ಯಾವುದೇ ಸಂಬಂಧ ಇಲ್ಲ, ಮಾಡಿದ್ದುಣ್ಣೋ ಮಹಾರಾಯ ಅನ್ನೋ ರೀತಿ ರಾಹುಲ್ ಗಾಂಧಿ ಅವರಿಗೆ ಆಗಿದೆ. ಒಂದು ಸಮುದಾಯದ ಕುರಿತು ಈ ರೀತಿ ಹೇಳಿಕೆ ನೀಡುವುದು ತಪ್ಪು. ಮತ್ತೆ ಈಗ ಕೋಲಾರಕ್ಕೆ ಬರುತ್ತಿದ್ದಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿ ಅತ್ತೆ-ಸೊಸೆ ಮಧ್ಯೆ ಜಗಳ ತಂದಿಡುತ್ತಿದೆ- ಸಿ.ಎಂ ಇಬ್ರಾಹಿಂ

ಮತ್ತೆ ಕೋಲಾರಕ್ಕೆ ಬಂದು ಮತ್ತೆ ಇಲ್ಲಿ ಏನೇನೋ ಭಾಷಣ ಮಾಡಿದರೇ ಮತ್ತೆ ತಲೆ ಕೆಟ್ಟವರು ಯಾರಾದ್ರೂ ಕೇಸ್ ಹಾಕ್ತಾರೆ ಎಂದು ಎಚ್ಚರಿಸಿದರು. ರಾಹುಲ್ ಗಾಂಧಿ ಅವರು ಕೋಲಾರಕ್ಕೆ ಬರುತ್ತಿರುವುದರಿಂದ ಯಾವುದೆ ರೀತಿಯ ಎಫೆಕ್ಟ್ ಬಿಜೆಪಿಗೆ ಆಗುವುದಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಶಾಸಕ ಶಾಮನೂರು ಕೊಟ್ಟ ಗಿಫ್ಟ್ ಅನ್ನು ರಸ್ತೆಗೆ ಎಸೆದು ಮಹಿಳೆಯರ ಆಕ್ರೋಶ