ಬಿಜೆಪಿ ಕರ್ನಾಟಕ ಜನರ ಸಮಾಧಿ ಕಟ್ಟುತ್ತಿದೆ : ಹೆಚ್‍ಡಿಕೆ

ಮೈಸೂರು: ಮೋದಿ (Narendra Modi) ಭಾಷಣದಲ್ಲಿ ತಿರುಳಿಲ್ಲ. ಕರ್ನಾಟಕದ (Karnataka) ಜನರ ಸಮಾಧಿ ಕಟ್ಟುತ್ತಿರೋದು ಬಿಜೆಪಿ (BJP) ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಜನ ಜೀವ ಕಳೆದುಕೊಳ್ಳುತ್ತಿದ್ದಾಗ ಮೋದಿ ಬರಲಿಲ್ಲ. ಈಗ ನನಗೆ ಜೀವ ಕೊಡಿ ಎಂದು ಮೋದಿ ಕೇಳ್ತಾ ಇದ್ದಾರೆ ಸ್ವೇಚ್ಚಾಚಾರದ ಅಧಿಕಾರ ಮಾಡುವವರಿಗೆ ಮೋದಿ ಏನು ಹೇಳಲು ಆಗಿಲ್ಲ. ಅವರ ಪಕ್ಷದವರು ಲೂಟಿ ಮಾಡುತ್ತಿದ್ರೆ ಏನು ಹೇಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಈಗ ಮೀಸಲಾತಿ ನೀಡಿರೋದು ಡೋಂಗಿ. ಜನರ ಕಿವಿಗೆ ಮತ್ತೊಮ್ಮೆ ಬಿಜೆಪಿ ಹೂ ಮುಡಿಸಲು ಮುಂದಾಗಿದೆ. ಒಬ್ಬರದ್ದು ಕಿತ್ತು ಇನ್ನೊಬ್ಬರಿಗೆ ಕೊಡಿ ಎಂದು ಯಾರು ಕೇಳಿರಲಿಲ್ಲ. ಇದು ಚುನಾವಣೆಗಾಗಿ ಗಿಮಿಕ್ ಮಾಡಿದ್ದಾರೆ ಎಂದು ಗುಡುಗಿದರು. ಇದನ್ನೂ ಓದಿ: SSLC ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ BMTC

ನಮಗೆ 224 ಕ್ಷೇತ್ರದಲ್ಲಿ ಗೆಲ್ಲುವುದು ಮುಖ್ಯ. ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ. ಹಾಸನ, ಮಂಡ್ಯ ಎಲ್ಲಾ ಕಡೆ ಗೊಂದಲ ಇಲ್ಲದೆ ಕ್ಲಿಯರ್ ಆಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕೋ ಕೆಲಸ ಮಾಡ್ತಿವೆ: ಬೊಮ್ಮಾಯಿ

Comments

Leave a Reply

Your email address will not be published. Required fields are marked *