ಕಾಂಗ್ರೆಸ್‌ನಿಂದ ಮೊದಲ ಪಟ್ಟಿ ರಿಲೀಸ್‌ – 124 ಕ್ಷೇತ್ರಗಳಿಗೆ ಅಭ್ಯರ್ಥಿ

-ವರುಣಾದಿಂದ ಸಿದ್ದು ಸ್ಪರ್ಧೆ

ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ (Election) ಕಾಂಗ್ರೆಸ್‌ನಿಂದ (Congress) ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು, 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ.

ಯಾವ ಕ್ಷೇತ್ರಕ್ಕೆ ಯಾರ‍್ಯಾರು?: ಇಲ್ಲಿದೆ ಪಟ್ಟಿ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah)  ಅವರು ವರುಣಾದಿಂದ (Varuna) ಕಡೆಗೂ ಸ್ಪರ್ಧೆ ಮಾಡುವುದು ಅಂತಿಮವಾಗಿದೆ. ಟೀ. ನರಸೀಪುರದಲ್ಲಿ ಹೆಚ್.ಸಿ.ಮಹದೇವಪ್ಪ ಹಾಗೂ ಕನಕಪುರದಿಂದ ಡಿ.ಕೆ. ಶಿವಕುಮಾರ್‌ ಸ್ಪರ್ಧೆ ಖಚಿತವಾಗಿದೆ.

 

ದೇವನಹಳ್ಳಿಯಿಂದ ಮುನಿಯಪ್ಪಗೆ ಟಿಕೆಟ್, ಬೆಂಗಳೂರು ರಾಜಾಜಿನಗರದಲ್ಲಿ ಪುಟ್ಟಣ್ಣ, ಆರ್ ಆರ್ ನಗರ ಕುಸುಮಾ ಹೆಚ್, ನರಸಿಂಹರಾಜ ತನ್ವಿರ್ ಸೇಠ್‌ಗೆ ಟಿಕೆಟ್‌  ಘೋಷಣೆಯಾಗಿದೆ. ಇದನ್ನೂ ಓದಿ: ರಾಜ್ಯಕ್ಕಿಂದು ಪ್ರಧಾನಿ ಮೋದಿ ಆಗಮನ

ಚಿಕ್ಕೋಡಿಯಿಂದ ಸದಲಗಾ ಗಣೇಶ ಹುಕ್ಕೇರಿಗೆ, ಕಾಗವಾಡ ಭರಮಗೌಡ ಆಲಗೌಡ ಕಾಗೆ, ಹುಕ್ಕೇರಿಯಿಂದ ಎ.ಬಿ ಪಾಟೀಲ್, ಯಮಕನಮರಡಿಯಿಂದ ಸತೀಶ್ ಜಾರಕಿಹೊಳಿ, ಬೆಳಗಾವಿ ಗ್ರಾಮೀಣದಿಂದ ಲಕ್ಷ್ಮಿ ಹೆಬ್ಬಾಳ್ಕರ್, ಖಾನಾಪುರದಿಂದ ಡಾ. ಅಂಜಲಿ ನಿಂಬಾಳ್ಕರ್, ಬೈಲಹೊಂಗಲದಿಂದ ಮಹಾಂತೇಶ ಶಿವಾನಂದ ಕೌಜಲಗಿ, ರಾಮದುರ್ಗದಿಂದ ಅಶೋಕ್ ಎಂ.ಪಟ್ಟಣ, ಜಮಖಂಡಿಯಿಂದ ಆನಂದ ಸಿದ್ದು ನ್ಯಾಮಗೌಡ ಅವರ ಹೆಸರು ಅಂತಿಮವಾಗಿದೆ.

Comments

Leave a Reply

Your email address will not be published. Required fields are marked *