ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ – ಎದುರಾಳಿಗಳಿಗೆ ಇದೊಂದು ಪಾಠ ಎಂದ ಪ್ರತಾಪ್ ಸಿಂಹ

ಬೆಳಗಾವಿ: ರಾಹುಲ್ ಗಾಂಧಿ (Rahul Gandhi) ಅವರನ್ನ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಯಾರೊಬ್ಬರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ರಾಜಕೀಯ ಎದುರಾಳಿಗಳಿಗೆ ಇದೊಂದು ಪಾಠ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಎಚ್ಚರಿದ್ದಾರೆ.

ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ ವಿಚಾರಕ್ಕೆ ಗೋಕಾಕ್‌ನಲ್ಲಿ ಮಾತನಾಡಿದ ಅವರು, ಇನ್ಮುಂದೆ ರಾಜಕೀಯ ಎದುರಾಳಿಗಳು ಯಾರೊಬ್ಬರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು, ಅವಹೇಳನಕಾರಿಯಾಗಿ ಟೀಕಿಸುವಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕುವ ಗಟ್ಟಿಯಾದ ಸಂದೇಶ ಸಾರಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿ ಅನರ್ಹ

ರಾಜಕೀಯ ಏನೇ ಇರಲಿ ತಂದೆ, ತಾಯಿ ಬಗ್ಗೆ ಮಾತನಾಡುವಂತಹದ್ದು, ಇನ್ನೊಬ್ಬರನ್ನ ಅವಹೇಳನ ಮಾಡುವುದು, ಕುಟುಂಬವನ್ನು ಅವಮಾನ ಮಾಡುವಂತಹ ಪ್ರಯತ್ನ ಮಾಡುವುದು ಇಂತಹ ರಾಜಕೀಯ ದುರ್ನಡತೆಗಳಿಗೆ ಇನ್ಮುಂದೆ ಕಡಿವಾಣ ಬೀಳಬೇಕು. ರಾಹುಲ್ ಗಾಂಧಿಯನ್ನ ವ್ಯಕ್ತಿಗತವಾಗಿ ನೋಡುತ್ತಿಲ್ಲ. ಈ ರೀತಿ ಮಾಡುವ ಎಲ್ಲರಿಗೂ ಇದರೊಂದು ಎಚ್ಚರಿಕೆಯ ಗಂಟೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗ ಆರೋಪ – ಸುಪ್ರೀಂಕೋರ್ಟ್ ಮೆಟ್ಟಿಲೇರಿದ ವಿಪಕ್ಷಗಳು

Comments

Leave a Reply

Your email address will not be published. Required fields are marked *