ಮಗುವಿಗೆ ಹೊಡೆದ ಅಂತ ಶಿಕ್ಷಕನಿಗೆ ಅಟ್ಟಾಡಿಸಿ, ಹಿಗ್ಗಾಮುಗ್ಗ ಥಳಿಸಿದ ಪೋಷಕರು

ಚೆನ್ನೈ: ಪಾಠ ಹೇಳಿಕೊಡೋ ಶಿಕ್ಷಕರು ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಹೊಡೆದು ಸರಿದಾರಿಗೆ ತರುವುದು ಸಹಜ. ಹೀಗೆ 2ನೇ ತರಗತಿಯ ಬಾಲಕಿಯೊಬ್ಬಳಿಗೆ (Girl) ಶಿಕ್ಷಕ (Teacher) ಹೊಡೆದ ಅಂತ ವಿದ್ಯಾರ್ಥಿನಿಯ (Student) ಪೋಷಕರು (Parents) ಶಾಲೆಗೆ (School) ಬಂದು ಶಿಕ್ಷಕನನ್ನು ಅಟ್ಟಾಡಿಸಿಕೊಂಡು ಹೋಗಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ.

ತಮಿಳುನಾಡಿನ ಟುಟಿಕೋರಿನ್ ಜಿಲ್ಲೆಯ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಈ ಘಟನೆ ನಡೆದಿದೆ. ತಮ್ಮ ಮಗುವಿಗೆ ಥಳಿಸಿದ್ದಾನೆ ಎಂದು ಆರೋಪಿಸಿ ಪೋಷಕರು ಶಿಕ್ಷಕ ಆರ್ ಭರತ್‌ನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಘಟನೆಯ ವೀಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಶಿಕ್ಷಕನಿಗೆ ಥಳಿಸಿದ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿರುವ ವೀಡಿಯೋದಲ್ಲಿ ದಂಪತಿ ತರಗತಿಗೆ ನುಗ್ಗಿ, ತಮ್ಮ ಮಗುವಿಗೆ ಶಿಕ್ಷಕ ಹೊಡೆದಿದ್ದಾನೆ ಎಂದು ಆರೋಪಿಸಿ ಜಗಳ ಶುರುಮಾಡಿರುವುದು ಕಂಡುಬಂದಿದೆ. ಮಗುವನ್ನು ಹೊಡೆಯುವುದು ಕಾನೂನು ಬಾಹಿರ. ನಿಮಗೆ ಮಗುವಿಗೆ ಹೊಡೆಯಲು ಹಕ್ಕು ಯಾರು ನೀಡಿದರು? ನನ್ನ ಚಪ್ಪಲಿಯಿಂದ ಹೊಡೆಯುತ್ತೇನೆ ಎಂದು ಮಗುವಿನ ತಾಯಿ ಸೆಲ್ವಿ ವಾಗ್ದಾಳಿ ನಡೆಸಿದ್ದಾಳೆ. ಇದನ್ನೂ ಓದಿ: ರಾಯಚೂರಿನಲ್ಲಿ ಅಬಕಾರಿ ಪೊಲೀಸರ ದಾಳಿ- ಮಹಿಳೆ ವಶ

ಈ ಎಲ್ಲಾ ದೃಶ್ಯಗಳನ್ನೂ ಇತರ ಮಕ್ಕಳು ನೋಡುತ್ತಿರುವಂತೆಯೇ ಬಾಲಕಿಯ ತಂದೆ ಶಿವಲಿಂಗ ಶಿಕ್ಷಕನನ್ನು ಅಟ್ಟಾಡಿಸಿಕೊಂಡು ಶಾಲೆಯ ಅಂಗಳಕ್ಕೆ ಹೋಗಿದ್ದಾನೆ. ಬಳಿಕ ಕೈಗೆ ಸಿಕ್ಕ ಇಟ್ಟಿಗೆ, ಕಲ್ಲಿನ ಚೂರುಗಳಿಂದ ಶಿಕ್ಷಕನ ಮೇಲೆ ದಾಳಿ ನಡೆಸಿದ್ದಾನೆ. ದಂಪತಿ ಶಿಕ್ಷಕನ ಮೇಲೆ ಮನಬಂದಂತೆ ದಾಳಿ ನಡೆಸುವುದನ್ನು ಕಂಡ ಇತರ ಶಿಕ್ಷಕರು ಸಹಾಯಕ್ಕಾಗಿ ಕಿರುಚಿಕೊಂಡಿರುವುದು ಕಂಡುಬಂದಿದೆ.

ಮಾಹಿತಿ ಪಡೆದ ಪೊಲೀಸರು ಘಟನೆಗೆ ಸಂಬಂಧಪಟ್ಟಂತೆ ಮಗುವಿನ ತಂದೆ, ತಾಯಿ ಹಾಗೂ ಅಜ್ಜನನ್ನು ಬಂಧಿಸಿದ್ದಾರೆ. ಆರೋಪಿಗಳ ಮೇಲೆ ಹಲ್ಲೆ, ಕ್ರಿಮಿನಲ್ ಬೆದರಿಕೆ, ಪಿತೂರಿ ಹಾಗೂ ಸರ್ಕಾರಿ ನೌಕರನನ್ನು ಕರ್ತವ್ಯದಿಂದ ನಿರ್ವಹಿಸದಂತೆ ತಡೆದಿರುವುದಕ್ಕಾಗಿ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಎಲ್ ಬಾಲಾಜಿ ಸರವಣನ್ ತಿಳಿಸಿದ್ದಾರೆ.

ವಿಚಾರಣೆ ವೇಳೆ ಬಾಲಕಿ ತರಗತಿಯಲ್ಲಿ ತನ್ನ ಸಹಪಾಠಿಗಳೊಂದಿಗೆ ಜಗಳವಾಡುತ್ತಿದ್ದಳು. ಈ ವೇಳೆ ಆಕೆಗೆ ಶಿಕ್ಷಕ ತನ್ನ ಸೀಟು ಬದಲಾಯಿಸುವಂತೆ ಹೇಳಿದ್ದ. ಬಳಿಕ ಬಾಲಕಿ ತನ್ನ ಸೀಟಿನಿಂದ ಎದ್ದೇಳುವ ವೇಳೆ ಆಯಾ ತಪ್ಪಿ ಬಿದ್ದಿದ್ದಾಳೆ. ಬಳಿಕ ಮನೆಗೆ ಹೋಗಿ ತನ್ನ ಅಜ್ಜನಲ್ಲಿ ಶಿಕ್ಷಕ ಹೊಡೆದಿರುವುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ: ದೆಹಲಿಯ ಬ್ರಿಟಿಷ್‌ ಹೈಕಮೀಷನ್‌ಗೆ ನೀಡಿದ ಭದ್ರತೆ ತೆಗೆದು ಯುಕೆಗೆ ಬಿಸಿ ಮುಟ್ಟಿಸಿದ ಭಾರತ

Comments

Leave a Reply

Your email address will not be published. Required fields are marked *