ನಮ್ಮ ಕೈಲಾಸ ಗಡಿಯಿಲ್ಲದ ದೇಶ – ನಿತ್ಯಾನಂದ

ನವದೆಹಲಿ: ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸವು ಗಡಿರಹಿತ ಸೇವಾ ಆಧಾರಿತ ರಾಷ್ಟ್ರ ಎಂದು ಸ್ವಯಂಘೋಷಿತ ದೇವಮಾನವ ನಿತ್ಯಾನಂದ (Nithyananda) ತಿಳಿಸಿದ್ದಾರೆ.

ಕೈಲಾಸವು ಬಹು ಘಟಕಗಳು, ಎನ್‌ಜಿಓಗಳು, ದೇವಾಲಯಗಳು ಮತ್ತು ಬಹುದೇಶಗಳಲ್ಲಿನ ಮಠಗಳ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ದಿ ವಾಷಿಂಗ್ಟನ್ ಪೋಸ್ಟ್‌ನ ಮಾರ್ನಿಂಗ್ ಮಿಕ್ಸ್ ಸಿಬ್ಬಂದಿ ಬರಹಗಾರರ ಪ್ರಶ್ನೆಗೆ ನಿತ್ಯಾನಂದ ಇಮೇಲ್ (Email)  ಮೂಲಕ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಹಿಂದೂ ಹೆಣ್ಣುಮಕ್ಕಳನ್ನು ಅವಮಾನಿಸಿದ್ರೆ ಕೈ ಕತ್ತರಿಸುತ್ತೇವೆ – ಕೇಂದ್ರ ಸಚಿವ ಚೌಬೆ ವಿವಾದಾತ್ಮಕ ಹೇಳಿಕೆ 

ನಿಮ್ಮ ರಾಷ್ಟ್ರವು ಹೇಗೆ ಕಾರ್ಯನಿರ್ವಹಿಸುತ್ತದೆ? ನಿಮ್ಮ ರಾಷ್ಟ್ರಕ್ಕೆ ಚುನಾವಣೆಗಳಿವಿಯೆ? ಅಲ್ಲಿನ ಪ್ರಜೆಗಳಿಗೆ ಪಾಸ್‌ಪೋರ್ಟ್, ಜನನ ಪ್ರಮಾಣಪತ್ರ ಸೇರಿದಂತೆ ಏನಾದರೂ ದಾಖಲೆಗಳಿವೆಯಾ ಎಂಬ ಪ್ರಶ್ನೆಗಳಿಗೆ ನಿತ್ಯಾನಂದರ ಪತ್ರಿಕಾ ಕಚೇರಿಯು (Press Office) ವಿಡಿಯೋ ಮೂಲಕ ಉತ್ತರ ನೀಡಿದೆ. ಅಲ್ಲದೇ ಇದರ ಮಾಹಿತಿಯನ್ನು ನಿತ್ಯಾನಂದರ ಟ್ವಿಟ್ಟರ್ (Twitter) ಖಾತೆಯಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: 5 ವರ್ಷದಲ್ಲಿ ಎನ್‍ಜಿಓಗಳಿಗೆ 89,000 ಕೋಟಿ ರೂ. ವಿದೇಶಿ ನಿಧಿ- ಕರ್ನಾಟಕಕ್ಕೆ 2ನೇ ಸ್ಥಾನ 

ನಾವು ಪ್ರಾಚೀನ ಪ್ರಬುದ್ಧ ಹಿಂದೂ ನಾಗರಿಕತೆಯ ರಾಷ್ಟ್ರದ ಪುನರುಜ್ಜೀವನವಾಗಿದ್ದೇವೆ. ವಿಶ್ವಸಂಸ್ಥೆಯಿಂದ (UNO) ಗುರುತಿಸಲ್ಪಟ್ಟ ಎನ್‌ಜಿಓಗಳ ಮೂಲಕ ಪ್ರಪಂಚದಾದ್ಯಂತ ಅನೇಕ ದೇಶಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ಇದನ್ನು ಸಾರ್ವಭೌಮ ಆದೇಶವನ್ನು ಹೊಂದಿರುವ ಮಾಲ್ಟಾ (Malta) ದೇಶದಲ್ಲಿ ಸ್ಥಾಪಿಸಲಾಗಿದೆ. ಇದು ಗಡಿರಹಿತ ಸೇವಾ ಕೇಂದ್ರಿತ ರಾಷ್ಟ್ರ. ಇದನ್ನು ನಿತ್ಯಾನಂದರು ಸ್ಥಾಪಿಸಿದರು ಎಂದು ಪತ್ರಿಕಾ ಕಚೇರಿಯು ತಿಳಿಸಿದೆ. ಇದನ್ನೂ ಓದಿ: ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ ಪರಾರಿ – ಪಂಜಾಬ್‌ ಹಲವೆಡೆ ಇಂಟರ್‌ನೆಟ್‌ ಸ್ಥಗಿತ 

ಅತ್ಯಾಚಾರ ಪ್ರಕರಣಗಳ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ಓಡಿಹೋಗಿದ್ದಾನೆ ಎಂದು ಟೀಕಿಸಲಾಗಿದೆ. ಈ ಆರೋಪಗಳೆಲ್ಲವೂ ಸುಳ್ಳು. ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶರು ನಿರಪರಾಧಿ ಎಂದು ಕ್ಯಾಲಿಫೋರ್ನಿಯಾದ (California) ನ್ಯಾಯಾಲಯದಲ್ಲಿ ಎಪ್ರಿಲ್ 4, 2013ರಲ್ಲಿ ಸಾಬೀತಾಯಿತು. ಅಲ್ಲದೇ ನ್ಯಾಯಾಲಯವು ಸುಳ್ಳು ಸಾಕ್ಷಿದಾರರಿಗೆ ಅರ್ಧ ಮಿಲಿಯನ್ ಡಾಲರ್ ದಂಡವನ್ನು ವಿಧಿಸಿತು ಎಂದು ಪತ್ರಿಕಾ ಕಚೇರಿಯು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ತರಬೇತಿ ವಿಮಾನ ಪತನ – ಮಹಿಳಾ ಪೈಲಟ್‌, ಮಾರ್ಗದರ್ಶಿ ಸಾವು

Comments

Leave a Reply

Your email address will not be published. Required fields are marked *