ಸಿಂಹಪ್ರಿಯ ಬದುಕಿಗೆ ಹೊಸ ಅತಿಥಿಯ ಆಗಮನ? ಗುಡ್‌ ನ್ಯೂಸ್‌ ಬಗ್ಗೆ ಸುಳಿವು ನೀಡಿದ ಹರಿಪ್ರಿಯಾ

ಸ್ಯಾಂಡಲ್‌ವುಡ್‌ನ (Sandalwood) ಸಿಂಹಪ್ರಿಯ (Simhapriya) ಜೋಡಿ ಈ ವರ್ಷ ಜನವರಿ 26ಕ್ಕೆ ಹಸೆಮಣೆ ಏರಿದ್ದರು. ಇಷ್ಟು ದಿನ ಮದುವೆ, ಹನಿಮೂನ್ ಎಂದು ಬ್ಯುಸಿಯಾಗಿದ್ದ ವಸಿಷ್ಠ ಸಿಂಹ- ಹರಿಪ್ರಿಯಾ (Haripriya) ಜೋಡಿ ಮತ್ತೆ ಸಿನಿಮಾ ಕೆಲಸದತ್ತ ಮುಖ ಮಾಡಿದ್ದಾರೆ. ಈ ಬೆನ್ನಲ್ಲೇ ಹರಿಪ್ರಿಯಾ ಅವರು ಗುಡ್ ನ್ಯೂಸ್ ಹೇಳುವುದಾಗಿ ಬಿಗ್ ಅಪ್‌ಡೇಟ್ ನೀಡಿದ್ದಾರೆ.

ಎರಡೂವರೆ ವರ್ಷಗಳು ಪ್ರೀತಿಸಿದ್ದ ಸಿಂಹಪ್ರಿಯಾ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಬಳಿಕ ಮೈಸೂರಿನಲ್ಲಿ ವಸಿಷ್ಠ ಸಿಂಹ (Vasista Simha) ಮತ್ತು ಹರಿಪ್ರಿಯಾ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಎರಡು ತಿಂಗಳು ಕಳೆದಿದೆ. ಈಗ ಗುಡ್ ನ್ಯೂಸ್ ಬಗ್ಗೆ ನಟಿ ಮಾತನಾಡಿದ್ದಾರೆ.

ಹೆಸರೇನು ಮೇಡಮ್, ಯಾವಾಗ ಅನೌನ್ಸ್ ಮಾಡ್ತೀರಾ, ಕೇಳಿದ್ದು ನಿಜಾನಾ, ಗುಡ್ ನ್ಯೂಸ್ ಎಂಬ ಮೆಸೇಜ್ ಇರುವ ಸ್ಕ್ರಿನ್ ಶಾಟ್‌ನ ನಟಿ ಹರಿಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನಗೆ ಗೊತ್ತು ನೀವೆಲ್ಲರೂ ಬಹುಶಃ ಏನೆಂದು ತಿಳಿಯುವ ಕುತೂಹಲ ಹೊಂದಿರುತ್ತೀರಿ. ಅನೌನ್ಸ್ ಮಾಡುವ ಮೊದಲು ಒಂದು ಊಹೆ ಮಾಡಿ ಎಂದು ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

View this post on Instagram

 

A post shared by Hariprriya (@iamhariprriya)

ಹರಿಪ್ರಿಯಾ ಈ ಪೋಸ್ಟ್ ಅಪ್‌ಡೇಟ್ ಮಾಡ್ತಿದ್ದಂತೆ ಅಭಿಮಾನಿಗಳು ಸಖತ್ ಆಗಿಯೇ ಕಾಮೆಂಟ್ ಮೂಲಕ ಪ್ರಶ್ನೆ ಮಾಡಿದ್ದಾರೆ. ಮರಿ ಸಿಂಹ ಅಥವಾ ಸಿಂಹಿಣಿ ಬರುತ್ತಿದ್ದಾರಾ? ಸಿನಿಮಾ ಅಪ್‌ಡೇಟ್ ಬಗ್ಗೆ ಗುಡ್ ನ್ಯೂಸ್ ಹೇಳ್ತೀದ್ದೀರಾ ಎಂದು ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ. ಪ್ರೆಗ್ನೆನ್ಸಿ ವಿಚಾರಯನ್ನೇ ಇರಬೇಕು ಎಂದು ಅನೇಕರು ಕುತೂಹಲ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಗುಡ್ ನ್ಯೂಸ್ ಎನು ಎಂಬುದನ್ನ ನಟಿ ಹೇಳುವವರೆಗೂ ಕಾದುನೋಡಬೇಕಿದೆ.

Comments

Leave a Reply

Your email address will not be published. Required fields are marked *