IPL 2023: RCB ತಂಡಕ್ಕೆ ಆನೆ ಬಲ – ವಿಲ್‌ ಜಾಕ್ಸ್‌ ಬದಲಿಗೆ ಕಿವೀಸ್‌ ಸ್ಟಾರ್‌ ಆಲ್‌ರೌಂಡರ್‌ ಸೇರ್ಪಡೆ

ಮುಂಬೈ: ಪ್ರತಿಷ್ಠಿತ 16ನೇ ಆವೃತ್ತಿಯ ಐಪಿಎಲ್‌ (IPL 2023) ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದೆ. ದೇಶಾದ್ಯಂತ 12 ಕ್ರೀಡಾಂಗಣದಲ್ಲಿ ಒಟ್ಟು 70 ಲೀಗ್‌ ಪಂದ್ಯಗಳು ನಡೆಯಲಿವೆ. ಪಂದ್ಯ ಆರಂಭಕ್ಕೆ ದಿನಗಣನೆ ಬಾಕಿಯಿರುವ ಹೊತ್ತಿನಲ್ಲೇ ಆರ್‌ಸಿಬಿ (RCB) ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ.

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಇಂಗ್ಲೆಂಡ್‌ ಕ್ರಿಕೆಟಿಗ ವಿಲ್‌ ಜಾಕ್ಸ್‌ (Will Jacks) ಬದಲಿಗೆ ನ್ಯೂಜಿಲೆಂಡ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಮೈಕೆಲ್‌ ಬ್ರೇಸ್ವೆಲ್‌ (Michael Bracewell) ಅವರನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಇದನ್ನೂ ಓದಿ: RCB ಪಂದ್ಯಗಳ ಟಿಕೆಟ್‌ ದರ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು – ಟಿಕೆಟ್‌ ಬುಕ್‌ ಮಾಡೋದು ಹೇಗೆ..?

3.2 ಕೋಟಿಗೆ ಬಿಕರಿಯಾಗಿದ್ದ ಇಂಗ್ಲೆಂಡ್‌ ಕ್ರೆಕೆಟಿಗ ವಿಲ್‌ ಜಾಕ್ಸ್‌ ಬೆನ್ನಿನ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಆದ್ದರಿಂದ ಬದಲಿ ಆಟಗಾರನಾಗಿ ಮೈಕೆಲ್‌ ಬ್ರೇಸ್ವೆಲ್‌ ಅವರನ್ನ 1 ಕೋಟಿ ರೂ.ಗೆ ಆರ್‌ಸಿಬಿ ತಂಡ ಖರೀದಿ ಮಾಡಿದೆ.

16 T20 ಪಂದ್ಯಗಳನ್ನಾಡಿರುವ ಬ್ರೇಸ್ವೆಲ್‌ 113 ರನ್‌ ಗಳಿಸಿದ್ದು, 21 ವಿಕೆಟ್‌ ಪಡೆದಿದ್ದಾರೆ. ಇತ್ತೀಚೆಗೆ ಭಾರತದ ವಿರುದ್ಧ ನಡೆದ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲೇ 78 ಎಸೆತಗಳಲ್ಲಿ 140 ರನ್‌ ಚಚ್ಚಿದ್ದರು. ಇದನ್ನೂ ಓದಿ: ವಿರಾಟ್ ಅಣ್ಣನ ಸಲಹೆ ಸಹಾಯವಾಯ್ತು – RCB ಗೆಲುವಿನ ನಂತ್ರ ಮಂದಾನ ಮುಖದಲ್ಲಿ ಮಂದಹಾಸ

ಏಪ್ರಿಲ್‌ 2 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ಮೊದಲ ಪಂದ್ಯ ನಡೆಯಲಿದ್ದು, ಮುಂಬೈ ಇಂಡಿಯನ್ಸ್‌ ವಿರುದ್ಧ ಸೆಣಸಲಿದೆ.

Comments

Leave a Reply

Your email address will not be published. Required fields are marked *