ಕಬ್ಜ ಕ್ರೇಜ್ : 3500 ಚಿತ್ರಮಂದಿರ, 50 ದೇಶ, 5 ಭಾಷೆಗಳಲ್ಲಿ ನಾಳೆ ಕಬ್ಜ ಸಿನಿಮಾ ರಿಲೀಸ್

ನ್ನಡದ ಮತ್ತೊಂದು ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆರ್.ಚಂದ್ರು (R. Chandru) ಮತ್ತು ಮೂವರು ಸ್ಟಾರ್ ನಟರ ಕಾಂಬಿನೇಷನ್ ಇರುವ ‘ಕಬ್ಜ’ (Kabzaa) ಚಿತ್ರ ನಾಳೆ ವಿಶ್ವದಾದ್ಯಂತ ಮೂರುವರೆ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ (Release) ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾವನ್ನು ಐವತ್ತು ದೇಶಗಳಲ್ಲಿ ನೋಡಬಹುದಾಗಿದೆ. ಈ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಚಂದ್ರು ಅವರ ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ.

ಶಿವರಾಜ್ ಕುಮಾರ್, ಸುದೀಪ್ ಮತ್ತು ಉಪೇಂದ್ರ ಇದೇ ಮೊದಲ ಬಾರಿಗೆ ಮೂವರು ಸ್ಟಾರ್ ನಟರು ಒಂದೇ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅದ್ಧೂರಿ ತಾರಾಗಣ, ಮೇಕಿಂಗ್, ಭಾರೀ ಬಜೆಟ್ ಮತ್ತು ಹೊಸ ಬಗೆಯ ಕಥೆಯು ಈ ಸಿನಿಮಾದಲ್ಲಿದೆ. ಈ ಎಲ್ಲ ಕಾರಣದಿಂದಾಗಿ ಕಬ್ಜ ಭಾರೀ ನಿರೀಕ್ಷೆಯನ್ನಂತೂ ಮೂಡಿಸಿದೆ. ಈಗಾಗಲೇ ಮೂವರು ನಟರ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿಸಿತ್ತು. ಮೊದಲ ದಿನದ ಬಹುತೇಕ ಟಿಕೇಟ್ ಖಾಲಿಯಾಗಿವೆ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ತೆಲುಗಿನ ಹೆಮ್ಮೆ ಎಂದ ಐಕಾನ್ ಸ್ಟಾರ್‌ ವಿರುದ್ಧ ಚರಣ್ ಫ್ಯಾನ್ಸ್ ಕಿಡಿ

ಸುದೀಪ್ (Sudeep) ಮತ್ತು ಉಪೇಂದ್ರ (Upendra), ಶಿವಣ್ಣ (ShivaRajkumar) ನಟಿಸಿರುವ ‘ಕಬ್ಜ’ ಸಿನಿಮಾ ಈಗಾಗಲೇ ಚಿತ್ರದ ಟೀಸರ್, ಪೋಸ್ಟರ್‌ನಿಂದ ನಿರೀಕ್ಷೆ ಹುಟ್ಟುಹಾಕಿದೆ. ಇತ್ತೀಚಿಗಷ್ಟೇ `ಚುಮು ಚುಮು ಚಳಿ ಚಳಿ’ ಎನ್ನುವ ಸ್ಪೆಷಲ್ ಸಾಂಗ್‌ನಲ್ಲಿ ಉಪ್ಪಿ ಜೊತೆ ತಾನ್ಯ ಹೋಪ್ ಹೆಜ್ಜೆ ಹಾಕಿದ್ದರು. ಈ ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು.

ಈ ಚಿತ್ರದಲ್ಲಿ ಬ್ರಿಟಿಷ್ ಕಾಲದ ಕಥೆ, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ನಂತರದ ಕಥೆ ಇರುವ ಸುಳಿವನ್ನು ಟ್ರೈಲರ್ ನೀಡಿದೆ. ದೇಶಪ್ರೇಮ, ವ್ಯವಸ್ಥೆಯ ವಿರುದ್ಧ ಹೋರಾಟ, ಪಾತಕ ಲೋಕ, ತಾಯಿ ಸೆಂಟಿಮೆಂಟ್, ಬ್ರದರ್ ಸೆಂಟಿಮೆಂಟ್ ಎಲ್ಲವನ್ನೂ ‘ಕಬ್ಜ’ದಲ್ಲಿ ಆರ್.ಚಂದ್ರು ಕಟ್ಟಿಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *