ಮಾರ್ಚ್ 17ಕ್ಕೆ `ಯುವರತ್ನ’ ಸಿನಿಮಾ ಮತ್ತೆ ತೆರೆಗೆ

ನ್ನಡ ಚಿತ್ರರಂಗದಲ್ಲಿ ಮಾರ್ಚ್ 17ಕ್ಕೆ ಎರಡೆರಡು ಸಂಭ್ರಮ. ಒಂದು ಅಪ್ಪು ಅವರ ಹುಟ್ಟುಹಬ್ಬ ಮತ್ತೊಂದು `ಕಬ್ಜ’ ಸಿನಿಮಾ ಬಹುಭಾಷೆಗಳಲ್ಲಿ ತೆರೆಕಾಣುತ್ತಿದೆ. ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ 49ನೇ ವರ್ಷದ ಹುಟ್ಟುಹಬ್ಬವನ್ನ (Birthday) ಅದ್ದೂರಿಯಾಗಿ ಆಚರಿಸಲು ಅಪ್ಪು ಫ್ಯಾನ್ಸ್ ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ: ಲೈಗರ್ ಬ್ಯೂಟಿ ಜೊತೆ ಹಸೆಮಣೆ ಏರಲಿದ್ದಾರೆ `ಆಶಿಕಿ 2′ ಹೀರೋ

ಪುನೀತ್ ರಾಜ್‌ಕುಮಾರ್ ಅವರು ಅಗಲಿ 2 ವರ್ಷಗಳಾಗಿದೆ. ಆದರೆ ಅವರ ನೆನಪು ಮಾತ್ರ ಇನ್ನೂ ಮಾಸಿಲ್ಲ. ಕಳೆದ ವರ್ಷದಂತೆ ಈ ಬಾರಿ ಕೂಡ ಅಪ್ಪು ಫ್ಯಾನ್ಸ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮಾರ್ಚ್ 17ರಂದು ಏನೆಲ್ಲಾ ವಿಶೇಷತೆಗಳು ಇರುತ್ತೆ ಅನ್ನೋದರ ಮಾಹಿತಿ ಇಲ್ಲಿದೆ.

ಅಪ್ಪು ಹುಟ್ಟುಹಬ್ಬಕ್ಕೆ ಬೆಂಗಳೂರಿನ ಜೆಪಿ ನಗರದ ಸಿದ್ಧಲಿಂಗೇಶ್ವರ ಚಿತ್ರಮಂದಿರ ವಿಶೇಷವಾಗಿ ರೆಡಿಯಾಗಿದೆ. ನಾಳೆ ಅಪ್ಪು ಅಭಿನಯದ `ಯುವರತ್ನ’ (Yuvaratna) ಸಿನಿಮಾವನ್ನು ವಿಶೇಷವಾಗಿ ಉಚಿತ ಪ್ರದರ್ಶನ ಮಾಡಲಾಗುತ್ತಿದೆ. ಯುವರತ್ನ ಸಿನಿಮಾ ರಾತ್ರಿ 9.30ಕ್ಕೆ ವಿಶೇಷ ಪ್ರದರ್ಶನ ಮಾಡಲಾಗುತ್ತೆ. ಆ ಬಳಿಕ ರಾತ್ರಿ 12 ಗಂಟೆಗೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಗುತ್ತದೆ. ಮಾರ್ಚ್ 12ರ ಬೆಳಗ್ಗೆ 9 ಗಂಟೆಗೆ ರಕ್ತದಾನ ಶಿಬಿರವನ್ನು ಅಪ್ಪು ಫ್ಯಾನ್ಸ್ ಹಮ್ಮಿಕೊಂಡಿದ್ದಾರೆ. ಜೆಪಿ ನಗರದ ದೊಡ್ಮನೆ ಅಭಿಮಾನಿಗಳ ಸಂಘ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಉಳಿದಂತೆ ಹಲವೆಡೆ ಅಪ್ಪು ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತೆ.

ಅಪ್ಪು ನಟನೆಯ ಕೊನೆಯ ಸಾಕ್ಷ್ಯಚಿತ್ರ `ಗಂಧದಗುಡಿ’ ಮಾರ್ಚ್ 17ರಂದು ಒಟಿಟಿಗೆ ಲಗ್ಗೆ ಇಡುತ್ತಿದೆ. ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ. ಜೊತೆಗೆ ಅದೇ ದಿನ `ಕಬ್ಜ’ ಚಿತ್ರ ಕೂಡ ತೆರೆ ಕಾಣುತ್ತಿದ್ದು, ಚಿತ್ರತಂಡವು ಸಿನಿಮಾವನ್ನ ಪುನೀತ್‌ಗೆ ಅರ್ಪಣೆ ಮಾಡ್ತಿದ್ದಾರೆ.

Comments

Leave a Reply

Your email address will not be published. Required fields are marked *