1,487 ಗ್ರಾಂ ಚಿನ್ನ ಸಾಗಾಟ ಮಾಡ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್

ಕೊಚ್ಚಿ: ಚಿನ್ನ (Gold) ಕಳ್ಳ ಸಾಗಾಣಿಕೆ (Smuggling) ಮಾಡುತ್ತಿದ್ದ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯನ್ನು (Cabin crew) ಕೊಚ್ಚಿ (Kochi) ವಿಮಾನ ನಿಲ್ದಾಣದಲ್ಲಿ ಬಂಧಿಸಿರುವುದಾಗಿ ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರೇಟ್ (Customs Preventive Commissionerate) ತಿಳಿಸಿದೆ.

ಆರೋಪಿಯನ್ನು ವಯನಾಡು ಮೂಲದ ಶಫಿ ಎಂದು ಗುರುತಿಸಲಾಗಿದ್ದು, ಬಂಧಿತನಿಂದ 1487 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ವಿಧಾನಸಭಾ ಚುನಾವಣೆಗೆ ರಾಯಚೂರು ಜಿಲ್ಲಾಡಳಿತ ಸಿದ್ಧತೆ- ಇವಿಎಂ ಪ್ರಾತ್ಯಕ್ಷಿಕೆ ಕೇಂದ್ರಗಳ ಆರಂಭ

ಬಹ್ರೇನ್ (Bahrain), ಕೋಯಿಕ್ಕೋಡ್ (Kozhikode) ಹಾಗೂ ಕೊಚ್ಚಿ ನಡುವಿನ ಏರ್ ಇಂಡಿಯಾ (Air India) ವಿಮಾನದ ಕ್ಯಾಬಿನ್ ಸಿಬ್ಬಂದಿ ಚಿನ್ನ ಸಾಗಾಣಿಕೆ ಮಾಡುತ್ತಿರುವ ಮಾಹಿತಿ ಅಧಿಕಾರಿಗಳಿಗೆ ಲಭಿಸಿತ್ತು. ಕೈಗಳಿಗೆ ಚಿನ್ನವನ್ನು ಸುತ್ತಿಕೊಂಡು, ಅಂಗಿಯ ತೋಳುಗಳಿಂದ ಮುಚ್ಚಿ ಗ್ರೀನ್ ಚಾನೆಲ್ ಮೂಲಕ ಆರೋಪಿ ಹಾದುಹೋಗುವ ಪ್ಲಾನ್ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸಿಂಗಾಪುರದಿಂದ (Singapore) ಚೆನೈಗೆ (Chennai) ಆಗಮಿಸಿದ್ದ ಇಬ್ಬರು ಪ್ರಯಾಣಿಕರಿಂದ 3.32 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡು ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಾರಿವಾಳದ ಕಾಲಿನಲ್ಲಿ ಕ್ಯಾಮೆರಾ – ಬೇಹುಗಾರಿಕೆ ಶಂಕೆ

Comments

Leave a Reply

Your email address will not be published. Required fields are marked *