ಪೋಷಕರೇ ಎಚ್ಚರ- ಮಕ್ಕಳಲ್ಲಿ ಹೆಚ್ಚಾಗ್ತಿದೆ ಆಡಿನೋ ವೈರಸ್..!

ಬೆಂಗಳೂರು: ಬೇಸಿಗೆ ಬಂತು ಅಂದ್ರೆ ಸಾಕು ನೆತ್ತಿಸುಡುವ ಬಿಸಿಲು, ಸೂರ್ಯನ ಝಳಕ್ಕೆ ಸುಸ್ತು. ಈ ಮಧ್ಯೆ ಈಗ ಸೀಸನಲ್ ಕಾಯಿಲೆಗಳು ಕೊಂಚ ಹೆಚ್ಚು ಎನ್ನುವಷ್ಟು ಆರ್ಭಟಿಸುತ್ತಿದೆ. ಅದರಲ್ಲೂ ಮಕ್ಕಳಲ್ಲಿ ಈಗ ಆಡಿನೋ ವೈರಸ್ (AdenoVirus) ಹಾವಳಿ ಇಟ್ಟಿದ್ದು ಪೋಷಕರು ಹೆಚ್ಚು ಕೇರ್ ಫುಲ್ ಆಗಿರಬೇಕು.

ಹೌದು. ಅವಧಿಗೂ ಮುನ್ನ ಬೇಸಿಗೆಯಬ್ಬರ ಜನರನ್ನು ಹೈರಾಣಾಗಿಸುತ್ತಿದೆ. ಮಗದೊಂದು ಕಡೆ ಉಷ್ಣ ಅಲೆಯ ಎಫೆಕ್ಟ್ ನಿಂದ ಕರ್ನಾಟಕ ಸಾಂಕ್ರಾಮಿಕ ಕಾಯಿಲೆಯ ಹಬ್ ಆಗಿದೆ. ಈ ಮಧ್ಯೆ ಮಕ್ಕಳಲ್ಲಿ ಈಗ ಆಡಿನೋ ವೈರಸ್ ಪತ್ತೆಯಾಗಿದೆ. ಒಬ್ಬರಿಂದ ಒಬ್ಬರಿಗೆ ಹಬ್ಬುವ ಈ ಆಡಿನೋ ವೈರಸ್ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸದ್ಯ ರಾಜ್ಯದಲ್ಲಿ 69 ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ 13 ಕೇಸ್ ದಾಖಲಾಗಿದೆ.

ಆಡಿನೋ ವೈರಸ್ ಲಕ್ಷಣಗಳೇನು..?
* ಅತಿಯಾದ ಜ್ವರ
* ಕಣ್ಣು ಕೆಂಪಾಗೋದು ಅಥವಾ ಪಿಂಕ್ ಕಲರ್‍ಗೆ ತಿರುಗೋದು
* ಹೊಟ್ಟೆನೋವು
* ಕೆಲವೊಮ್ಮೆ ನ್ಯೂಮೋನಿಯಾಗೆ ಟರ್ನ್ ಆಗುವ ಸಾಧ್ಯತೆ
* ಶ್ವಾಸಕೋಶದ ಸೋಂಕಿಗೆ ತುತ್ತಾಗುವ ಸಾಧ್ಯತೆ

ಆಡಿನೋ ವೈರಸ್‍ನಲ್ಲಿ ಆತಂಕ ಅಂದ್ರೆ ಕೆಲ ಮಕ್ಕಳು ನ್ಯೂಮೋನಿಯಾ (Pneumonia) ಗೆ ತುತ್ತಾಗುವ ಸಾಧ್ಯತೆ ಇದೆ. ಹೀಗಾಗಿ ಜ್ವರ, ಕೆಮ್ಮು ಹೆಚ್ಚು ದಿನ ಭಾದಿಸಿದ್ರೆ ವೈದ್ಯರನ್ನು ಭೇಟಿಯಾಗುವಂತೆ ಮಕ್ಕಳ ತಜ್ಞರು ಸಲಹೆ ಕೊಟ್ಟಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಹೇಳಿಕೆ ಬೆನ್ನಲ್ಲೇ ಆ್ಯಕ್ಟೀವ್ ಆದ ವಿ.ಸೋಮಣ್ಣ ಬೆಂಬಲಿಗರು

ಬಿಸಿಲಿನ ಝಳಕ್ಕೆ ಮಕ್ಕಳ ದೇಹವನ್ನು ನಿರ್ಜಲಿಕರಣವಾಗದಂತೆ ನೋಡಿಕೊಳ್ಳಬೇಕು, ತಾಜಾ ಹಣ್ಣು, ತರಕಾರಿ ಹೆಚ್ಚು ಸೇವಿಸುವಂತೆ ನೋಡಿಕೊಳ್ಳಬೇಕು ಅನ್ನೋದು ಪೋಷಕರಿಗೆ ವೈದ್ಯರ ಸಲಹೆ.

Comments

Leave a Reply

Your email address will not be published. Required fields are marked *