ಪಂಚರತ್ನ ಪ್ರಚಾರದ ವೇಳೆ ಜೆಡಿಎಸ್ ವಾಹನದ ಮೇಲೆ ಕಲ್ಲುತೂರಾಟ – ಚಾಲಕನಿಗೆ ಗಾಯ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ದೇವತಗಲ್ ಗ್ರಾಮದಲ್ಲಿ ಜೆಡಿಎಸ್ (JDS) ಪಂಚರತ್ನ ಪ್ರಚಾರದ (Pancharatna Campaign) ವೇಳೆ ಗಲಾಟೆ ನಡೆದಿದೆ. ಜೆಡಿಎಸ್ ಪ್ರಚಾರದ ಸ್ಕ್ರೀನ್ ವಾಹನದ ಮೇಲೆ ಕಲ್ಲುತೂರಾಟ (Stone Pelting) ನಡೆದಿದ್ದು, ಚಾಲಕನ ತಲೆಗೆ ಗಾಯವಾಗಿದೆ.

ದೇವತಗಲ್ ಗ್ರಾಮದಲ್ಲಿ ಜೆಡಿಎಸ್ ಪ್ರಚಾರ ಮಾಡದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ವಾಹನದ ಮೇಲೆ ಕಲ್ಲುತೂರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಚಾಲಕನನ್ನು ದೇವದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ದೇವಸ್ಥಾನ ಪ್ರವೇಶ ವಿಚಾರಕ್ಕೆ ಹಲ್ಲೆ- ಕಲ್ಲು ತೂರಾಟ, ಬೈಕ್ ಜಖಂ, 30 ಮಂದಿ ವಿರುದ್ಧ ದೂರು

ಕಲ್ಲು ತೂರಾಟ ಮಾಡಿದವರ ಮೇಲೆ ಕ್ರಮಕ್ಕೆ ಒತ್ತಾಯಿಸಲಾಗಿದೆ. ದೇವದುರ್ಗ ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ್ ಜಾಲಹಳ್ಳಿ ಪೊಲೀಸ್ ಠಾಣೆಗೆ ದೌಡಾಯಿಸಿದ್ದು ದೂರು ನೀಡಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಕರೆಮ್ಮ ನಾಯಕ್ ಒತ್ತಾಯಿಸಿದ್ದಾರೆ. ಜಾಲಹಳ್ಳಿ ಪೊಲೀಸ್ ಠಾಣೆ ಎದುರು ಜೆಡಿಎಸ್ ಕಾರ್ಯಕರ್ತರು ಜಮಾಯಿಸಿದ್ದಾರೆ. ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಬೆಂಕಿ- ಹೊತ್ತಿ ಉರಿದ ನೂರಾರು ಎಕರೆ ಅರಣ್ಯ ಪ್ರದೇಶ

Comments

Leave a Reply

Your email address will not be published. Required fields are marked *