ನಿತ್ಯಾನಂದನಿಗೆ ಭಾರತದಲ್ಲಿರೋ ಹಿಂದೂ ವಿರೋಧಿಗಳಿಂದ ಕಿರುಕುಳ- ಕ್ರಮಕ್ಕೆ ಶಿಷ್ಯೆ ಒತ್ತಾಯ

ಬರ್ರೆನ್: ನಿತ್ಯಾನಂದನಿಗೆ (Nithyananda) ಭಾರತದಿಂದ ಕಿರುಕುಳ ನೀಡುತ್ತಿಲ್ಲ. ಆದ್ರೆ ಭಾರತದಲ್ಲಿರುವ ಕೆಲವು ಹಿಂದೂ ವಿರೋಧಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಕೈಲಾಸ ಯುನೈಟೆಡ್ ಸ್ಟೇಟ್ಸ್‌ನ (United States Of Kailasa) ಶಾಶ್ವತ ರಾಯಭಾರಿ ವಿಜಯಾಪ್ರಿಯಾ ನಿತ್ಯಾನಂದ (Vijayapriya Nithyananda) ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಜಿನಿವಾದಲ್ಲಿ ನಡೆದ ವಿಶ್ವಸಂಸ್ಥೆಯ (UN) ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ (CRSR) ಮಹಾಸಭೆಯಲ್ಲಿ ಸ್ವಯಂಘೋಷಿತ ದೇವಮಾನವ ಹಾಗೂ ಕೈಲಾಸ ದೇಶದ ಸಂಸ್ಥಾಪಕ ಸ್ವಾಮಿ ನಿತ್ಯಾನಂದನ ಶಿಷ್ಯೆ ಭಾಗವಹಿಸಿದ್ದರು ಎಂದು ಹೇಳಲಾಗಿತ್ತು. ಈ ಸಭೆಯಲ್ಲಿ ನಿತ್ಯಾನಂದಗೆ ತನ್ನ ಜನ್ಮಸ್ಥಳದಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದರು. ಈ ಕುರಿತು ಸ್ಪಷ್ಟನೆ ನೀಡಿರುವ ನಿತ್ಯಾನಂದನ ಶಿಷ್ಯೆ, ಹಿಂದೂ ವಿರೋಧಿಗಳ ವಿರುದ್ಧ ಕ್ರಮಕ್ಕೆ ಅಗ್ರಹಿಸಿದ್ದಾರೆ.

ಫೆಬ್ರವರಿ 24 ರಂದು ನಡೆದ ಮಹಾಸಭೆಯಲ್ಲಿ ನೀಡಿದ್ದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಿತ್ಯಾನಂದ ತಮ್ಮ ಜನ್ಮಸ್ಥಳದಲ್ಲಿ ಕೆಲವು ಹಿಂದೂ ವಿರೋಧಿಗಳಿಂದ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ನಾನು ಹೇಳಿದ್ದೆ. ಕೈಲಾಸ ಯುನೈಟೆಡ್ ಸ್ಟೇಟ್ಸ್ ಭಾರತವನ್ನು ಉನ್ನತ ಗೌರವದಿಂದಲೇ ಕಾಣುತ್ತದೆ. ಈಗಲೂ ಭಾರತವನ್ನು ಗುರುಪೀಠವೆಂದೇ ಗೌರವಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಸ್ ನಿಲ್ದಾಣಕ್ಕೆ ಕಾರು ಡಿಕ್ಕಿ – ಭಾರತೀಯ ಮೂಲದ ವಿದ್ಯಾರ್ಥಿನಿ ಸಾವು

ನಮ್ಮ ಕಳಕಳಿ ಏನಿದ್ದರೂ ಹಿಂದೂ ವಿರೋಧಿ ಅಂಶಗಳ ಕಡೆಗೆ ಮಾತ್ರ ಕೇಂದ್ರೀಕೃತವಾಗಿದೆ. ಹಿಂದೂ ಧರ್ಮ ಮತ್ತು ಕೈಲಾಸದ ಪರಮೋಚ್ಚ ಮಠಾಧೀಶರ ವಿರುದ್ಧ ಹಿಂಸಾಚಾರ ಮುಂದುವರೆಸುವ ಇಂತಹ ಅಂಶಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಾವು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.

Vijayapriya Nithyananda

ನಿತ್ಯಾನಂದನ ಶಿಷ್ಯೆ ಹೇಳಿದ್ದೇನು?: ಜಿನಿವಾದಲ್ಲಿ ಈಚೆಗೆ ನಡೆದ ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ (ಸಿಇಎಸ್‌ಆರ್) ಮಹಾಸಭೆಯಲ್ಲಿ ವಿಶ್ವಸಂಸ್ಥೆಯ ಖಾಯಂ ರಾಯಭಾರಿ ಎಂದು ಹೇಳಿರುವ ವಿಜಯಪ್ರಿಯಾ, ನಿತ್ಯಾನಂದ ತನ್ನ ಜನ್ಮಸ್ಥಳವಾದ ಭಾರತ ದೇಶದಿಂದ ಹಿಂಸೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದರು. ಇದನ್ನೂ ಓದಿ: `ಕೈಲಾಸ’ ಹಿಂದೂ ಧರ್ಮದ ಮೊದಲ ಸಾರ್ವಭೌಮ ರಾಜ್ಯ- UN ಮಹಾಸಭೆಯಲ್ಲಿ ನಿತ್ಯಾನಂದ ಶಿಷ್ಯೆ ಪ್ರತಿಪಾದನೆ

Kailasa

ಕೈಲಾಸ ಹಿಂದೂ ಧರ್ಮದ ಮೊದಲ ಸಾರ್ವಭೌಮ ರಾಜ್ಯ. ಅದನ್ನು ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶ (ಸುಪ್ರೀಂ ಪಾಂಟಿಫ್ ಆಫ್ ಹಿಂದೂಯಿಸಂ – ಎಸ್‌ಪಿಹೆಚ್) ನಿತ್ಯಾನಂದ ಪರಮಶಿವಂ ಸ್ಥಾಪಿಸಿದ್ದಾರೆ. ಅವರು ಪ್ರಬುದ್ಧ ಹಿಂದೂ ನಾಗರಿಕತೆ ಮತ್ತು ಆದಿಶೈವ, ಸ್ಥಳೀಯ ಬುಡಕಟ್ಟು ಸೇರಿ ಹಿಂದೂ ಧರ್ಮದ 10 ಸಾವಿರ ಸಂಪ್ರದಾಯಗಳನ್ನ ಪುನರುಜ್ಜೀವನಗೊಳಿಸಿದ್ದಾರೆ. ಕೈಲಾಸ ಸುಸ್ಥಿರ ಅಭಿವೃದ್ಧಿಯೊಂದಿಗೆ ಯಶಸ್ವಿಯಾಗಿದೆ ಎಂದು ಪ್ರತಿಪಾದಿಸಿದ್ದರು.

Nithyananda

ನಾನಾ ದೇಶಗಳಲ್ಲಿ ಮಹಿಳೆಯರು ಅನುಭವಿಸುತ್ತಿರುವ ಹಿಂಸೆಗಳು, ಪುರುಷ ಪ್ರಧಾನ ಸಮಾಜಗಳಲ್ಲಿ ಒಳಗಾಗುತ್ತಿರುವ ಅಪಮಾನಗಳ ಬಗ್ಗೆ ಪ್ರತಿಪಾದಿಸಿದ್ದಾರೆ. ಜಗತ್ತಿನಲ್ಲಿ ಶೇ.82ರಷ್ಟು ಮಹಿಳೆಯರು ಪದೇ ಪದೇ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸಿದ್ದಕ್ಕಾಗಿ ಶೇ. 42ರಷ್ಟು ಮಹಿಳೆಯರು, ಅತ್ಯಾಚಾರ ಸೇರಿದಂತೆ ಅನೇಕ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *