ಪಾಕಿಸ್ತಾನದ ಮೊದಲ ತೃತೀಯಲಿಂಗಿ ಸುದ್ದಿ ನಿರೂಪಕಿ ಮೇಲೆ ಗುಂಡಿನ ದಾಳಿ

ಇಸ್ಲಾಮಾಬಾದ್: ಪಾಕಿಸ್ತಾನದ ಮೊದಲ ತೃತೀಯಲಿಂಗಿ ಸುದ್ದಿ ನಿರೂಪಕಿ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಲಾಹೋರ್‌ನಲ್ಲಿ ನಡೆದಿದೆ.

ಸುದ್ದಿ ನಿರೂಪಕಿ ಮಾರ್ವಿಯಾ ಮಲಿಕ್‌ ದಾಳಿಗೊಳಗಾದ ತೃತೀಯಲಿಂಗಿ. ಮೆಡಿಕಲ್‌ ಶಾಪ್‌ನಿಂದ ತಮ್ಮ ನಿವಾಸಕ್ಕೆ ಹಿಂತಿರುಗುತ್ತಿದ್ದಾಗ ಇಬ್ಬರು ಬಂದೂಕುಧಾರಿಗಳು ಮನಬಂದಂತೆ ಮಾರ್ವಿಯಾ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ಮಾರ್ವಿಯಾ ಅಪಾಯದಿಂದ ಪಾರಾಗಿದ್ದಾರೆ.

ತೃತೀಯಲಿಂಗಿ ಸಮುದಾಯದ ಪರವಾಗಿ ಧ್ವನಿ ಎತ್ತಿರುವುದಕ್ಕೆ ಅಪರಿಚಿತ ಸಂಖ್ಯೆಗಳಿಂದ ಬೆದರಿಕೆಯ ಫೋನ್ ಕರೆಗಳು ಮತ್ತು ಸಂದೇಶಗಳು ಬರುತ್ತಿದ್ದವು ಎಂದು ಸುದ್ದಿ ನಿರೂಪಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸುರಕ್ಷತೆಗಾಗಿ ತಾನು ಸದ್ಯಕ್ಕೆ ಮನೆಯನ್ನು ತೊರೆದಿದ್ದೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಾಲ ನೀಡಿದ ಚೀನಾ – ಅಮೆರಿಕ ಕಳವಳ

ಕೌನ್ಸಿಲ್ ಆಫ್ ಇಸ್ಲಾಮಿಕ್ ಐಡಿಯಾಲಜಿ (ಸಿಐಐ), ತೃತೀಯಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯಿದೆಯು “ಶರಿಯಾಕ್ಕೆ ಅನುಗುಣವಾಗಿಲ್ಲ” ಎಂದು ಪ್ರತಿಪಾದಿಸಿದೆ. ಕಾಯಿದೆಯ “ಅದರ ಹಲವಾರು ನಿಬಂಧನೆಗಳು ಇಸ್ಲಾಮಿಕ್ ತತ್ವಗಳಿಗೆ ಹೊಂದಿಕೆಯಾಗುವುದಿಲ್ಲ. ಈ ಕಾಯಿದೆಯು ಹೊಸ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಬಹುದು” ಎಂದು ಸಿಐಐ ತಿಳಿಸಿದೆ.

ತೃತೀಯಲಿಂಗಿ ಸಮುದಾಯಕ್ಕೆ ಸಂಬಂಧಿಸಿದ ಕಾನೂನನ್ನು ಪರಿಶೀಲಿಸಲು ಸಮಿತಿ ರಚಿಸುವಂತೆ ಸರ್ಕಾರವನ್ನು ಸಿಐಐ ಒತ್ತಾಯಿಸಿದೆ. ಆ ಸಮಿತಿಯು ಸಿಐಐ ಸದಸ್ಯರು, ಧಾರ್ಮಿಕ ವಿದ್ವಾಂಸರು, ಕಾನೂನು ಮತ್ತು ವೈದ್ಯಕೀಯ ತಜ್ಞರನ್ನು ಒಳಗೊಂಡಿರಬೇಕು ಎಂದು ಹೇಳಿದೆ. ಇದನ್ನೂ ಓದಿ: ವೀಡಿಯೋ ಗೇಮ್ ಕಸಿದುಕೊಂಡಿದ್ದಕ್ಕೆ ಮಾರಣಾಂತಿಕ ಹಲ್ಲೆ- ವಿದ್ಯಾರ್ಥಿ ಅರೆಸ್ಟ್

2018 ರಲ್ಲಿ ಮಾರ್ವಿಯಾ ಮಲಿಕ್ ಅವರು ಪಾಕಿಸ್ತಾನದ ಮೊದಲ ತೃತೀಯಲಿಂಗಿ ಸುದ್ದಿ ನಿರೂಪಕರಾದರು. ಬದುಕಿನಲ್ಲಿ ಏನಾದರು ಸಾಧಿಸಬೇಕೆಂದು ಕನಸು ಕಂಡಿದ್ದ ನನಗೆ ಕುಟುಂಬದವರೇ ಮಗ್ಗಲು ಮುಳ್ಳಾಗಿದ್ದರು. ಎಲ್ಲಾ ಕಷ್ಟಗಳನ್ನು ಎದುರಿಸಿ ಮುಂದೆ ಬಂದಿದ್ದೇನೆ. ನಮ್ಮ ಸಮುದಾಯವು ಕನಸನ್ನು ಹೊತ್ತು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಸಂದರ್ಶನವೊಂದರಲ್ಲಿ ಮಲಿಕ್‌ ಹೇಳಿದ್ದರು.

Comments

Leave a Reply

Your email address will not be published. Required fields are marked *