ಸ್ವಾಮೀಜಿಗಳು ವಿಧಾನಸೌಧಕ್ಕೆ ಬರುವಂತಾಗಬಾರದು: ಬಸವರಾಜ ಹೊರಟ್ಟಿ

ಧಾರವಾಡ: ಒಂದು ಮಠದ ಸ್ವಾಮೀಜಿ ಎಂದರೆ ಅವರು ನಮ್ಮೆಲ್ಲರಿಗೂ ಮಾರ್ಗದರ್ಶಕರು. ಮೊನ್ನೆ 8 ಸ್ವಾಮೀಜಿಗಳು ವಿಧಾನಸೌಧಕ್ಕೆ ಬಂದಿದ್ದರು. ಆದರೆ ಸ್ವಾಮೀಜಿಗಳು ವಿಧಾನಸೌಧಕ್ಕೆ ಬರುವಂತಾಗಬಾರದು ಎಂದು ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಹೇಳಿದರು.

ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಅವರು ಸ್ವಾಮೀಜಿಗಳನ್ನು ರಾಜಕಾರಣಕ್ಕೆ ಕರೆದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳು ವಿಧಾನಸೌಧಕ್ಕೆ ಬರುವಂತಾಗಬಾರದು. ಮಠ ಬಿಟ್ಟು ಹೊರಬರುವುದರಿಂದ ಏನಾಗುತ್ತದೆ ಎಂಬ ಅರ್ಥದಲ್ಲಿ ನಡ್ಡಾ ಅವರು ಹೇಳಿರಬಹುದು ಎಂದರು. ಇದನ್ನೂ ಓದಿ: ಮೋದಿ ಬಂದ್ಮೇಲೆ ದೇಶ ಅಭಿವೃದ್ಧಿಯಾಗಿಲ್ಲ, ನಾವು ಹುಟ್ಟುವ ಮುಂಚೆಯೇ ಆಗಿದೆ: ಹೆಚ್‌ಡಿಕೆ

ಮಠದಲ್ಲಿ ರಾಜಕಾರಣ ಸೇರಬಾರದು ಎಂದು ನಾನು ಹೇಳಿದ್ದೇನೆ. ಆದರೆ, ಅದನ್ನು ಎಲ್ಲರೂ ಕೇಳಬೇಕಲ್ಲ. ಎಲ್ಲ ವಿಷಯಗಳು ಕೆಲ ಮಠಗಳಲ್ಲೇ ಹುಟ್ಟಿಕೊಳ್ಳುತ್ತವೆ. ಎಲ್ಲ ಮಠಗಳು ಹಾಗೇ ಇಲ್ಲ. ಆದರೆ, ಕೆಲ ಮಠಗಳಲ್ಲಿ ಮಾತ್ರ ಬೇರೆ ಬೇರೆ ವಿಷಯಗಳು ಹುಟ್ಟಿಕೊಳ್ಳುತ್ತವೆ ಎಂದ ಅವರು, ನಮಗೆ ಮಾದರಿ ಎಂದರೆ ಸ್ವಾಮೀಜಿಗಳು. ಅವರು ಇನ್ನೊಬ್ಬರಿಗೆ ಮಾದರಿಯಾಗಬೇಕು. ರಾಜಕಾರಣ ಇವತ್ತು ಕಲುಷಿತವಾಗಿದೆ. ಮತ ಹಾಕುವವರು ಎಲ್ಲಿಯವರೆಗೆ ಬುದ್ಧಿವಂತರಾಗುವುದಿಲ್ಲವೋ ಅಲ್ಲಿಯವರೆಗೆ ಈ ದೇಶದಲ್ಲಿ ಒಳ್ಳೆಯ ಸರ್ಕಾರ ಬರುವುದಿಲ್ಲ ಎಂದರು. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಾಲ ನೀಡಿದ ಚೀನಾ – ಅಮೆರಿಕ ಕಳವಳ

Comments

Leave a Reply

Your email address will not be published. Required fields are marked *