ದಕ್ಷಿಣದ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಲೈಗರ್ ಸೋಲಿನ ನಂತರ ಅಕ್ಷರಶಃ ಕನಲಿ ಹೋಗಿದ್ದರು. ಮೈತುಂಬಾ ಸಾಲ, ಸೋಲಿನ ಅವಮಾನ, ಕೈಯಲ್ಲಿದ್ದ ಒಂದು ಸಿನಿಮಾ ಕೂಡ ಕೈ ಬಿಟ್ಟು ಹೋಗಿತ್ತು. ಇಂತಹ ಸನ್ನಿವೇಶದಲ್ಲಿ ಪುರಿಯನ್ನು ಕೈ ಹಿಡಿಯುವವರು ಯಾರು ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಕನ್ನಡ, ತಮಿಳು, ತೆಲುಗಿನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಪುರಿ ಅವರಿಗೆ ಇದೇ ಸಿನಿಮಾ ರಂಗವೇ ಮತ್ತೆ ಮೇಲಕ್ಕೆತ್ತುವುದೇ ಎಂದು ನಂಬಲಾಗಿತ್ತು. ಆದರೆ, ಅದು ಸುಳ್ಳಾದಂತೆ ಕಾಣುತ್ತಿದೆ.

ಹೌದು, ಸದ್ಯ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿರುವ ತಾಜಾ ಸಮಾಚಾರ ಏನೆಂದರೆ, ಪುರಿ ಜಗನ್ನಾಥ್ ಅವರಿಗಾಗಿ ಸಲ್ಮಾನ್ ಖಾನ್ ಕಾಲ್ಶೀಟ್ ನೀಡಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪುರಿ ಮತ್ತು ಸಲ್ಮಾನ್ ಖಾನ್ ಕಾಂಬಿನೇಷನ್ ನಲ್ಲಿ ಸಿನಿಮಾ ಒಂದು ಮೂಡಿ ಬಂದರೂ ಅಚ್ಚರಿಯಿಲ್ಲ. ಈಗಾಗಲೇ ಇಬ್ಬರ ಮಧ್ಯ ಮಾತುಕತೆ ನಡೆದಿದೆಯಂತೆ. ತಮಗೆ ಎಂತಹ ಚಿತ್ರ ಮಾಡಬೇಕು ಎಂದು ಸಲ್ಮಾನ್ ಹೇಳಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಬೆಂಗಳೂರು ವಿಶ್ವವಿದ್ಯಾಲಯ ಬಿಕಾಂ ಪಠ್ಯದಲ್ಲಿ ಪುನೀತ್ ರಾಜಕುಮಾರ್

ವಿಜಯ್ ದೇವರಕೊಂಡ ಮತ್ತು ಪುರಿ ಜಗನ್ನಾಥ್ ಕಾಂಬಿನೇಷನ್ನ ಲೈಗರ್ ಸಿನಿಮಾ ಅಂದುಕೊಂಡಷ್ಟು ಯಶಸ್ಸು ಕಾಣಲಿಲ್ಲ. ಬಾಕ್ಸ್ ಆಫೀಸಿನಲ್ಲೂ ಮಕಾಡೆ ಮಲಗಿತ್ತು. ನಿರ್ಮಾಪಕರಿಗೆ ಭಾರೀ ನಷ್ಟ ಮಾಡಿತ್ತು. ಈ ಸೋಲು ಅವರನ್ನು ಹತಾಷೆಗೆ ದೂಡಿತ್ತು. ಸಿನಿಮಾ ಬಿಡುಗಡೆ ನಂತರ ಅವರು ಎಷ್ಟೋ ದಿನಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲೇ ಇಲ್ಲ. ಇದೀಗ ಆ ಎಲ್ಲ ನೋವಿನಿಂದಲೂ ಅವರು ಆಚೆ ಬಂದಿದ್ದಾರೆ ಎಂದು ಹೇಳಲಾಗುತ್ತಿದ್ದು. ಹೊಸ ಸಿನಿಮಾದ ಕೆಲಸದಲ್ಲಿ ಅವರು ಸದ್ಯದಲ್ಲೇ ತೊಡಗಿಕೊಳ್ಳಲಿದ್ದಾರೆ.

Leave a Reply