ಬೆರಕೆ ಅಂದ್ರೆ ಏನು? ಆ ಸಿ.ಟಿ ರವಿಗೆ ಸದ್ಬುದ್ಧಿ ಇಲ್ಲ – ಸಿದ್ದರಾಮಯ್ಯ

ಬಾಗಲಕೋಟೆ: ಬೆರಕೆ ಅಂದ್ರೆ ಏನು? ಬೆರಕೆ ಅಂದ್ರೆ ಏನೂ ಅಂತಾನೆ ನನಗೆ ಗೊತ್ತಿಲ್ಲ. ಆ ಸಿ.ಟಿ ರವಿಗೆ (CT Ravi) ಕಲ್ಚರ್ ಇಲ್ಲ, ಸದ್ಬುದ್ಧಿ ಇಲ್ಲ, ಇರೋದೆಲ್ಲಾ ಬರೀ ಗೂಂಡಾ ಸಂಸ್ಕೃತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹರಿಹಾಯ್ದಿದ್ದಾರೆ.

`ಸಿದ್ದರಾಮಯ್ಯ ಒಬ್ಬ ಬೆರಕೆ ರಾಜಕಾರಣಿ, ಒಬ್ಬ ಮತಾಂಧ’ ಎಂಬ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಜಮಖಂಡಿ ತಾಲೂಕಿನ ಖಾಜಿಬೀಳಗಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆರಕೆ ಅಂದ್ರೆ ಏನೂ ಅಂತಾನೇ ನನಗೆ ಗೊತ್ತಿಲ್ಲ. ಆ ಸಿ.ಟಿ ರವಿಗೆ ಕಲ್ಚರ್ ಇಲ್ಲ, ಗೂಂಡಾ ಸಂಸ್ಕೃತಿ ಇರೋದು ಅವನಿಗೆ. ಅವರೆಲ್ಲಾ ಮನುಷ್ಯತ್ವ ಇಲ್ಲದೇ ಇರೋರು, ಬಾಯಿಗೆ ಬಂದಂತೆ ಮಾತಾಡ್ತಾರೆ. ಸಿ.ಟಿ ರವಿಗೆ ಮನುಷ್ಯತ್ವ, ಸದ್ಬುದ್ಧಿ ಯಾವುದೂ ಇಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನು ಓದಿ: ಡಿ. 26ರಿಂದ ‘ರಂಗಪಯಣ’ ತಂಡದಿಂದ ನಟ ಶಂಕರ್ ನಾಗ್ ಹೆಸರಿನಲ್ಲಿ ನಾಟಕೋತ್ಸವ

ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೊ ಅನಾವರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಾವರ್ಕರ್ (VD Savarkar) ಬಗ್ಗೆ ನಾನೇನು ಮಾತನಾಡಿಲ್ಲ. ಮಾತನಾಡೋದಕ್ಕೂ ಹೋಗಲ್ಲ. ನ್ಯಾಷನಲ್ ಲೀಡರ್ಸ್ ವಲ್ಲಭಭಾಯಿ ಫೋಟೊ ಹಾಕಿದ್ದಾರೆ. ಅಂದ್ಮೇಲೆ ನೆಹರೂ ಫೋಟೊ ಹಾಕಬೇಕೋ, ಬೇಡವೋ? ಮಹಾತ್ಮಾ ಗಾಂಧೀಜಿ ಅವರದ್ದು ಹಾಕಿದ್ದಾರೆ. ನೆಹರೂ ಫೋಟೊ ಹಾಕ್ಬೇಕೋ. ಬೇಡ್ವೊ? ಅಂಬೇಡ್ಕರ್ ಅವರದ್ದು ಹಾಕಿದ್ದಾರೆ, ಜಗಜೀವನ್ ರಾಮ್ ಫೋಟೊ ಹಾಕ್ಬೇಕೋ, ಬೇಡ್ವೋ? ಬಸವಣ್ಣ, ವಾಲ್ಮೀಕಿ, ಕನಕದಾಸರು, ನಾರಾಯಣಗುರು, ಶಿಶುನಾಳ ಶರೀಫರೂ ಇದ್ದಾರೆ. ಕುವೆಂಪು ಇದ್ದಾರೆ ಎಲ್ಲ ದಾರ್ಶನಿಕರದ್ದೂ ಹಾಕಬೇಕಿತ್ತಲ್ವಾ? ದಾರ್ಶನಿಕರಿಂದ ಸಮಾಜಕ್ಕೆ ಒಳ್ಳೆಯದಾಗಬೇಕಲ್ವಾ? ಅಷ್ಟೇ ನಮ್ಮ ಡಿಮ್ಯಾಂಡ್ ಎಂದು ಹೇಳಿದ್ದಾರೆ. ಇದನ್ನು ಓದಿ: ವಿದೇಶಾಂಗ ಸಚಿವ ಜೈಶಂಕರ್ ಪುತ್ರನಿಗೆ ಚೀನಾ ಫಂಡಿಂಗ್ ಲಿಂಕ್ – ಕಾಂಗ್ರೆಸ್ ಗಂಭೀರ ಆರೋಪ

`ಅಭ್ಯರ್ಥಿ ಘೋಷಣೆ ಮಾಡೋರ ವಿರುದ್ಧ ಶಿಸ್ತು ಕ್ರಮ ಕೈಗೊಳ್ತೀವಿ’ ಎಂಬ ಜಿ.ಪರಮೇಶ್ವರ ಹೇಳಿಕೆ ವಿಚಾರಕ್ಕೆ, ಅಭ್ಯರ್ಥಿಯನ್ನ ಘೋಷಣೆ ಮಾಡಲು ಪಕ್ಷದಲ್ಲಿ ಒಂದು ಪ್ರಕ್ರಿಯೆ ಇದೆ. ಅದರ ಪ್ರಕಾರವೇ ಮಾಡಬೇಕು. ನಾನು ಯಾವ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಅವರಿಗೆ ಆಶೀರ್ವಾದ ಮಾಡಿ ಎಂದು ಹೇಳಿದ್ದೇನೆ ಎಂದಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *