ಚಿಕ್ಕಬಳ್ಳಾಪುರ: ಸಿದ್ದರಾಮಯ್ಯ (Siddaramaiah) ಅವರು ಮನೆಯಲ್ಲಿ ಕೂತು ಗೆಲ್ಲೋದಾದ್ರೆ, ನಾವು ಮಲಗಿಕೊಂಡೇ ಚುನಾವಣೆ (Election) ಗೆದ್ದುಬಿಡ್ತೀವಿ ಎಂದು ಸಚಿವ ಎಂಟಿಬಿ ನಾಗರಾಜ್ (MTB Nagaraj) ತಿರುಗೇಟು ನೀಡಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು `ನಾವ್ ಮನೆಯಲ್ಲಿ ಕೂತಿದ್ರೂ ಗೆದ್ದುಬಿಡ್ತೀವಿ’ ಅನ್ನೋ ಹೇಳಿಕೆಗೆ ಪ್ರತಿಕ್ರಿಯಿಸಿ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮನೆಯಲ್ಲಿ ಕೂತು ಗೆಲ್ಲೋದಾದ್ರೆ, ನಾವ್ ಮನೆಯಲ್ಲಿ ಮಲಗಿಕೊಂಡೆ, ನಿದ್ದೆ ಮಾಡಿಕೊಂಡೇ ಗೆದ್ದುಬಿಡ್ತೀವಿ ಅಂತಾ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಜನ ನನ್ನ ಸೋಲಿಸಿಬಿಟ್ರು: ಎಂಟಿಬಿ ನಾಗರಾಜ್

2023ರ ಚುನಾವಣೆಯ (Karnataka Elections 2023) ಬಳಿಕ ರಾಜ್ಯದಲ್ಲಿ ಮತ್ತೆ ನಮ್ಮದೇ ಬಿಜೆಪಿ (BJP) ಸರ್ಕಾರ ಸ್ಥಾಪನೆಯಾಗಲಿದೆ. ಮತ್ತೊಮ್ಮೆ ನಮ್ಮವರೇ ಸಿಎಂ ಆಗ್ತಾರೆ. ಮುಂದಿನ ಸಿಎಂ ಯಾರು ಅನ್ನೋದನ್ನ ರಾಜ್ಯ ಹಾಗೂ ಕೇಂದ್ರದ ನಾಯಕರು ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಕನಸಿನಲ್ಲೂ ಯೋಚನೆ ಮಾಡಿರಲಿಲ್ಲ: ನಿಖಿಲ್ ಕುಮಾರಸ್ವಾಮಿ
ಇನ್ನೂ ಹೊಸಕೋಟೆ (Hosakote) ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ನನ್ನ ಮಗನ ಸ್ಪರ್ಧೆ ಮಾಡಿಸಬೇಕು ಎಂಬ ಆಸೆ ಇದೆ. ನನಗೂ 72 ವರ್ಷ ವಯಸ್ಸಾಗಿದೆ, ಆದ್ರೆ ನನ್ನ ಮಗನಿಗೆ ಈಗ 36 ವರ್ಷ. ಆದ್ದರಿಂದ ಈಗಲೇ ನನ್ನ ಜೊತೆ ರಾಜಕೀಯ ಪ್ರವೇಶ ಮಾಡಿ, ದೇವರ ಅನುಗ್ರಹ ಹಾಗೂ ಜನಾಶೀರ್ವಾದ ಪಡೆಯಲಿ ಎಂಬುದು ನನ್ನ ಆಸೆ. ಈ ಬಗ್ಗೆ ಇನ್ನೂ ಹೈಕಮಾಂಡ್ ಜೊತೆಗೆ ಮಾತನಾಡಿಲ್ಲ. ಮಾತನಾಡಿದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

Leave a Reply