ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಕಾಮುಕ ಶಿಕ್ಷಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಧರ್ಮದೇಟು

ಮಂಡ್ಯ: ವಿದ್ಯಾರ್ಥಿ ನಿಲಯದಲ್ಲಿ (Hostel) ಲೈಂಗಿಕ ಕಿರುಕುಳ (Sexual Harassment) ನೀಡುತ್ತಿದ್ದ ಮುಖ್ಯ ಶಿಕ್ಷಕನೋರ್ವನಿಗೆ (Teacher) ವಿದ್ಯಾರ್ಥಿನಿಯರೆಲ್ಲ ಸೇರಿ ಧರ್ಮದೇಟು ನೀಡಿರುವ ಘಟನೆ ಮಂಡ್ಯದಲ್ಲಿ (Mandya) ನಡೆದಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿರುವ ವಿದ್ಯಾರ್ಥಿನಿಯರ ನಿಲಯದಲ್ಲಿ ಮುಖ್ಯಶಿಕ್ಷಕನೋರ್ವ ವಿದ್ಯಾರ್ಥಿನಿಯರಿಗೆ ಪ್ರತಿದಿನ ಲೈಗಿಂಕ ಕಿರುಕುಳ ನೀಡುತ್ತಿದ್ದ ಇದರಿಂದ ಬೇಸತ್ತು ವಿದ್ಯಾರ್ಥಿನಿಯರೆಲ್ಲ ಸೇರಿ ಕಾಮುಕ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ನೇಪಾಳಿಗಳನ್ನ ಮನೆ ಕೆಲಸಕ್ಕೆ ಸೇರಿಸಿಕೊಳ್ಳೊ ಮುನ್ನ ಎಚ್ಚರ – ಪೊಲೀಸರ ಸಲಹೆ

ಪ್ರೌಢ ಶಾಲೆಯೊಂದರ ಮುಖ್ಯಶಿಕ್ಷಕನಾಗಿದ್ದ ಚಿನ್ಮಯಮೂರ್ತಿಗೆ ಅಲ್ಲಿದ್ದ ವಿದ್ಯಾರ್ಥಿನಿಯರ ವಸತಿ ನಿಲಯದ ಉಸ್ತುವಾರಿ ನೀಡಲಾಗಿತ್ತು. ನಿತ್ಯ ಸಂಜೆ ಸಮಯದಲ್ಲಿ ಹಾಸ್ಟೆಲ್‍ಗೆ ಬರುತ್ತಿದ್ದ ಕಾಮುಕ ಚಿನ್ಮಯಮೂರ್ತಿ, ತನ್ನ ಕೊಠಡಿಗೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಅಸಭ್ಯ ವರ್ತನೆ ಮಾಡುತ್ತಿದ್ದ. ಅಶ್ಲೀಲ ವೀಡಿಯೋ ತೋರಿಸುವ ಜೊತೆಗೆ ಅಂಗಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಜೊತೆಗೆ ಲೈಂಗಿಕ ದೌರ್ಜನ್ಯದ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಿದ್ದ. ಯಾರಿಗಾದ್ರೂ ಹೇಳಿದ್ರೆ ಟಿಸಿಯಲ್ಲಿ ಬ್ಯಾಡ್ ಕ್ಯಾರೆಕ್ಟರ್ ಎಂದು ನಮೂದಿಸುವುದಾಗಿ ಬೆದರಿಕೆ ಹಾಕಿದ್ದ. ಇಷ್ಟು ವರ್ಷ ಆತನ ದೌರ್ಜನ್ಯ ಸಹಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರು ನಿನ್ನೆ ರಾತ್ರಿ ಸಿಡಿದೆದ್ದಿದ್ದಾರೆ. ನಿನ್ನೆ ರಾತ್ರಿ ವಿದ್ಯಾರ್ಥಿನಿ ಒಬ್ಬಾಕೆಯನ್ನು ಕೊಠಡಿಗೆ ಕರೆಸಿ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಭಯದಿಂದ ವಿದ್ಯಾರ್ಥಿನಿ ಕೂಗಿಕೊಂಡಾಗ ಉಳಿದ ವಿದ್ಯಾರ್ಥಿನಿಯರು ನೆರವಿಗೆ ಬಂದಿದ್ದಾರೆ. ಕಾಮುಕ ಶಿಕ್ಷಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಧರ್ಮದೇಟು ನೀಡಿದ್ದಾರೆ. ಇದನ್ನೂ ಓದಿ: ಕೇರಳ ಕುಟ್ಟಿ ಫೋಟೋಗೆ ಮನಸೋತ ಶಿಕ್ಷಕ – ಮ್ಯಾಟ್ರಿಮೊನಿ ಹೆಸರಲ್ಲಿ ಲಕ್ಷ ಲಕ್ಷ ಪೀಕಿದ ಯುವತಿ

ಈ ಘಟನೆಯ ವಿಚಾರ ತಿಳಿದು ಗ್ರಾಮಸ್ಥರು ಹಾಸ್ಟೆಲ್ ಬಳಿಗೆ ಬಂದು ಆಕ್ರೋಶ ಹೊರಹಾಕಿದರು. ಬಳಿಕ ಚಿನ್ಮಯಮೂರ್ತಿಯನ್ನು ಕೆಆರ್‌ಎಸ್‌ ಠಾಣೆ ಪೊಲೀಸರು ವಶಕ್ಕೆ ಪಡೆದರು. ನಿಲಯ ಪಾಲಕಿ ನೀಡಿದ ದೂರು ಆಧರಿಸಿ ಎಫ್‍ಐಆರ್ ದಾಖಲಾಗಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *