ಇಸ್ಲಾಮಾಬಾದ್: ನಾವು ನಮ್ಮ ಕಿಂಗ್ ಬಾಬರ್ ಅಜಮ್ಗಿಂತಲೂ (Babar Azam) ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇವೆ ಎಂದು ಪಾಕಿಸ್ತಾನದ ಅಭಿಮಾನಿಗಳು ಟೀಂ ಇಂಡಿಯಾದ (Team India) ಮಾಜಿ ನಾಯಕ ವಿರಾಟ್ ಕೊಹ್ಲಿಗೆ (Virat Kohli) ವಿಶೇಷ ಸಂದೇಶ ರವಾನಿಸಿದ್ದಾರೆ.

ಪಾಕಿಸ್ತಾನ (Pakistan) ಹಾಗೂ ಇಂಗ್ಲೆಂಡ್ (England) ನಡುವೆ ಮುಲ್ತಾನ್ನಲ್ಲಿ ನಡೆದ 2ನೇ ಟೆಸ್ಟ್ (Test) ಪಂದ್ಯದಲ್ಲಿ ಅಭಿಮಾನಿಗಳಿಬ್ಬರು ಹಿಡಿದಿದ್ದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪೋಸ್ಟರ್ನಲ್ಲಿ, ಹಾಯ್ ಕಿಂಗ್ ಕೊಹ್ಲಿ ನಮ್ಮಲ್ಲಿಗೆ ಬಂದು ಏಷ್ಯಾಕಪ್ ಆಡಿ. ನಾವು ನಮ್ಮ ಕಿಂಗ್ ಬಾಬರ್ ಅಜಮ್ಗಿಂತ ಹೆಚ್ಚು ನಿಮ್ಮನ್ನು ಪ್ರೀತಿಸುತ್ತೇವೆ ಎಂದು ಬರೆದುಕೊಂಡಿರುವ ಪೋಸ್ಟರ್ ಹಿಡಿದು ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ನಿಮ್ಮ ಸಾಧನೆ ಎಲ್ಲರಿಗೂ ಗೊತ್ತು – ರೊನಾಲ್ಡೊಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ

ಇದೀಗ ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೊಹ್ಲಿಯ ಅಭಿಮಾನಿಗಳ ಅಭಿಮಾನಕ್ಕೆ ಮೆಚ್ಚುಗೆ ಕೇಳಿ ಬರುತ್ತಿದೆ. ಇದನ್ನೂ ಓದಿ: ಮೊದಲ ಟೆಸ್ಟ್ನಿಂದ ರೋಹಿತ್ ಹೊರಕ್ಕೆ – ಕನ್ನಡಿಗ ಕ್ಯಾಪ್ಟನ್
#ViratKohli𓃵 phenomenal fan base in Pakistan, pak fans loves kohli batting 👍👏 pic.twitter.com/JezFO3YLtz
— RK Reddy 🇮🇳 (@Rams_krrish) December 12, 2022
ಇತ್ತ ಮುಲ್ತಾನ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕ್ ವಿರುದ್ಧ ಇಂಗ್ಲೆಂಡ್ 26 ರನ್ಗಳ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. ಕೊನೆಯ ಟೆಸ್ಟ್ ಪಂದ್ಯ ಡಿ.17 ರಿಂದ ಆರಂಭವಾಗಲಿದೆ.

Leave a Reply