ಚಿಕ್ಕಮಗಳೂರು: 47 ವರ್ಷಗಳ ಹೋರಾಟದ ಫಲವಾಗಿ ಚಿಕ್ಕಮಗಳೂರಿನ ದತ್ತಪೀಠಕ್ಕೆ (Dattapeeta) ಹಿಂದೂ ಅರ್ಚಕರ ನೇಮಕವಾಗಿದೆ. ಆದರೆ ಈಗ ಹೊಸ ವಿವಾದ ತಲೆದೋರಿದೆ. ದತ್ತಪೀಠದಲ್ಲಿ ಅರ್ಚಕರು ಮೈಲಿಗೆ ಆಗುತ್ತೆ ಎಂದು ಮೌಲ್ವಿಗಳಿಗೆ (Maulvi) ಪೂಜೆ ಮಾಡಲು ಬಿಡ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮೈಲಿಗೆ ಆಗುತ್ತದೆ ಎಂದು ದತ್ತಪೀಠದಲ್ಲಿ ಮೌಲ್ವಿಗಳಿಗೆ ಪೂಜೆ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಅರ್ಚಕರ ವಿರುದ್ಧ ಕೋಮು ಸೌಹಾರ್ದ ವೇದಿಕೆ ಗಂಭೀರ ಆರೋಪ ಮಾಡಿದೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತನಿಗೆ ಬೆದರಿಕೆ ಆರೋಪ – ಸರ್ಕಲ್ ಇನ್ಸ್ಪೆಕ್ಟರ್ ಸೇರಿ 7 ಮಂದಿ ವಿರುದ್ಧ FIR

ಕೋರ್ಟ್ ಹೇಳಿದ್ದು ದತ್ತಪೀಠದ ಹೊರಾಂಡದಲ್ಲಿ ಪೂಜೆ ಮಾಡ್ಬೇಕು ಅಂತ. ಆದರೆ ಗುಹೆಯೊಳಗೆ ಪೂಜೆ ಮಾಡಿದ್ದಾರೆ. ಜೊತೆಗೆ ಕಲ್ಲಪ್ಪ ಹಂಡೀಭಾಗ್ ಆತ್ಮಹತ್ಯೆ ಪ್ರಕರಣ ಮುಖ್ಯ ಆರೋಪಿ ಖಾಂಡ್ಯ ಪ್ರವೀಣ್ ಕೂಡ ಪೂಜೆ ಮಾಡಿದ್ದಾನೆ ಅಂತ ಆರೋಪಿಸಲಾಗಿದೆ.
ಈ ಬಗ್ಗೆ ಡಿಸಿಗೆ ದೂರು ನೀಡಿದ್ರೆ, ಈ ಸಮಿತಿಗೂ ನನಗೂ ಯಾವುದೇ ಸಂಬಂಧವೇ ಇಲ್ಲ ಅಂತಿದ್ದಾರೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಅರ್ಚಕರನ್ನ ವಾಪಸ್ ಕಳುಹಿಸಬೇಕು. ಕೋರ್ಟ್ ಹೇಳಿದ್ದು ಕೇವಲ ಮೂರು ದಿನಕ್ಕೆ ಮಾತ್ರ ಅರ್ಚಕರು ಪೂಜೆ ಮಾಡ್ಬೇಕು ಅಂತ. ಆದರೆ ದತ್ತಜಯಂತಿ ಮುಗಿದರೂ ಡಿಸಿ ಅರ್ಚಕರನ್ನ ಮುಂದುವರಿಸುತ್ತಿದ್ದಾರೆ ಎಂದು ಮುಸ್ಲಿಂ ಮುಖಂಡರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ನೀರು ತುಂಬಿದ್ದ ಬಕೆಟ್ಗೆ ಬಿದ್ದು 10 ತಿಂಗಳ ಕಂದಮ್ಮ ಸಾವು

Leave a Reply