98ರ ಹರೆಯದಲ್ಲೂ ರಷ್ಯಾ ವಿರುದ್ಧ ಹೋರಾಡಲು ಮುಂದಾದ ವೃದ್ಧೆ

ಕೀವ್: ರಷ್ಯಾ-ಉಕ್ರೇನ್ ನಡುವಿನ ಯುದ್ಧದಿಂದ ಉಕ್ರೇನ್‍ನ ಪ್ರಮುಖ ನಗರಗಳು ಧ್ವಂಸಗೊಂಡಿದೆ. ಭೀಕರ ದಾಳಿಯ ನಡುವೆ ಲಕ್ಷಾಂತರ ಮಂದಿ ದೇಶವನ್ನು ಬಿಟ್ಟು ವಲಸೆ ಹೋದರು. ಆದರೆ ಈ ನಡುವೆ 98 ವರ್ಷದ ಮಹಿಳೆ ರಷ್ಯಾ ವಿರುದ್ಧ ಹೋರಾಡಲು ಸೇನೆಗೆ ಸೇರಲು ಮುಂದಾಗಿದ್ದಾರೆ.

ಹೌದು ಈ ಕುರಿತಂತೆ ಉಕ್ರೇನಿಯನ್ ವಿದೇಶಾಂಗ ವ್ಯವಹಾರ ಸಚಿವಾಲಯ ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದು, 98 ವರ್ಷದ ಓಲ್ಹಾ ಟ್ವೆರ್ಡೋಖ್ಲಿಬೋವಾ ಅವರು ರಷ್ಯಾ ವಿರುದ್ಧ ಹೋರಾಡಲು ಸೇನೆಗೆ ಸೇರಿದ್ದಾರೆ. ಎರಡನೇ ಮಹಾಯುದ್ಧದಲ್ಲಿ ಸಕ್ರಿಯವಾಗಿ ಹೋರಾಡಿರುವ ಓಲ್ಹಾ ಟ್ವೆರ್ಡೋಖ್ಲಿಬೋವಾ ಅವರಿಗೆ ಯುದ್ಧ ಮಾಡಿ ಅನುಭವವಿದೆ. ಹಾಗಾಗಿ ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದಾಳಿ ನಡೆಸಲು ಆದೇಶಿಸಿದ ಬಳಿಕ ತಮ್ಮ ತಾಯ್ನಾಡನ್ನು ರಕ್ಷಿಸಲು ಸೇನೆಗೆ ಸೇರಲು ಓಲ್ಹಾ ಟ್ವೆರ್ಡೋಖ್ಲಿಬೋವಾ ಅವರು ಮುಂದಾದರು. ಆದರೆ ಅವರ ವಯಸ್ಸಿನ ಕಾರಣದಿಂದಾಗಿ ಸೇನೆಗೆ ಸೇರಿಸಿಕೊಳ್ಳಲು ನಿರಾಕರಿಸಲಾಗಿದೆ. ಇದನ್ನೂ ಓದಿ: ಮದರಸಾಗಳಲ್ಲಿ ಶಿಕ್ಷಣ ಪದ್ಧತಿ ತರುವ ಪ್ರಯತ್ನ ಮಾಡ್ತೇವೆ: ಬಿ.ಸಿ ನಾಗೇಶ್

ಸದ್ಯ ಈ ಪೋಸ್ಟ್‌ಗೆ ಇಲ್ಲಿಯವರೆಗೂ ಸುಮಾರು 3,800 ಲೈಕ್‍ಗಳು ಮತ್ತು ಕಾಮೆಂಟ್‍ಗಳ ಸುರಿಮಳೆಯೇ ಹರಿದುಬಂದಿದೆ. ಅಲ್ಲದೇ ನೆಟ್ಟಿಗರು ಓಲ್ಹಾ ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಅವರಿಗೆ ದೀರ್ಘಾಯುಷ್ಯ ಸಿಗಲಿ ಹಾರೈಸಿದ್ದಾರೆ. ಇದನ್ನೂ ಓದಿ: ಸರ್ಕಾರವೇ ಜನರ ಬಳಿ ಬಂದು ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಗ್ರಾಮ ವಾಸ್ತವ್ಯ: ಆರ್.ಅಶೋಕ್

Comments

Leave a Reply

Your email address will not be published. Required fields are marked *