90ರಿಂದ 95 ಪರ್ಸೆಂಟ್ ಟಿಕೆಟ್ ಹಾಲಿ ಶಾಸಕರಿಗೇ ಸಿಗುತ್ತದೆ- ಡಿಕೆಶಿ

ಬೆಂಗಳೂರು: ಹೆಚ್ಚು ಕಡಿಮೆ 90ರಿಂದ 95 ಪರ್ಸೆಂಟ್ ಟಿಕೆಟ್ (Ticket) ಹಾಲಿ ಶಾಸಕರಿಗೆ ಸಿಗುತ್ತದೆ. ಕೆಲವು ಸಂಧಾನಗಳು ಹಾಗೂ ಮಾತುಕತೆಗಳು ನಡೆಯುತ್ತಿವೆ. ಎಲ್ಲವೂ ಸರಿ ಆಗುತ್ತದೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಇನ್ನೂ ಪಟ್ಟಿ ನೋಡಿಲ್ಲ. ಎಲ್ಲಾ ಸರಿ ಹೋಗುತ್ತದೆ. ಕೆಲವು ಕ್ಲಾರಿಫಿಕೇಶನ್‌ಗಳ ನಂತರ ಟಿಕೆಟ್ ಹಂಚಿಕೆ ಆಗುತ್ತದೆ ಎಂದರು. ಇದನ್ನೂ ಓದಿ: ಮಾಜಿ ಸಂಸದ ಧ್ರುವನಾರಾಯಣ್ ಪುತ್ರನಿಗೆ ನಂಜನಗೂಡು ಟಿಕೆಟ್ 

ಸಿದ್ದರಾಮಯ್ಯ (Siddaramaiah) ವರುಣಾದಿಂದ (Varuna) ಟಿಕೆಟ್ ಕೇಳಿದ್ದರು. ಅವರಿಗೆ ವರುಣಾದಿಂದಲೇ ಟಿಕೆಟ್ ಕೊಟ್ಟಿದ್ದಾರೆ. ಅವರು ಕೋಲಾರ (Kolar) ಕೇಳಿದ್ದರೆ ಕೋಲಾರವನ್ನು ಕೊಡುತ್ತಿದ್ದರು. ಮೂರು ನಾಲ್ಕು ದಿನದ ಹಿಂದೆಯೇ ಟಿಕೆಟ್ ಹಂಚಿಕೆ ಆಗಬೇಕಿತ್ತು. ಆದರೆ ಅಮವಾಸ್ಯೆ ಸೇರಿದಂತೆ ಹಲವು ಕಾರಣಗಳಿಂದ ತಡವಾಯಿತು. ಅಮವಾಸ್ಯೆಯಂದು ಸೂರ್ಯ ಬಂದಿದ್ದಾನೆ. ಸಿಂಗಲ್ ನೇಮ್ ಇರುವ 124 ಕ್ಷೇತ್ರಗಳ ಹೆಸರು ಕ್ಲಿಯರ್ ಆಗಿದೆ. ಉಳಿದ ಕೆಲವು ಕಡೆ ಸಿಂಗಲ್ ನೇಮ್ ಇದ್ದರೂ, ಚರ್ಚೆಗಳು ನಡೆಯಬೇಕಿದೆ ಎಂದು ಹೇಳಿದರು. ಇದನ್ನೂ ಓದಿ: ಗೊಂದಲಕ್ಕೆ ತೆರೆ- ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆ 

ನನ್ನ ಆಪ್ತರ ಕ್ಷೇತ್ರಗಳು ಎಂದು ಇಲ್ಲ. ಎಲ್ಲಾ 224 ಕ್ಷೇತ್ರಗಳು ನಮ್ಮದೇ. ಪೆನ್ನು, ಪೇಪರ್ ನನ್ನ ಹತ್ತಿರವೇ ಇದೆ. ಹಾಗೆಂದು ಎಲ್ಲವೂ ನಾನು ಹೇಳಿದಂತೆ ಆಗುವುದಿಲ್ಲ. ಪಕ್ಷ, ಹೈಕಮಾಂಡ್ ತೀರ್ಮಾನ ಇರುತ್ತದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಮೊದಲ ಪಟ್ಟಿ ರಿಲೀಸ್‌ – 124 ಕ್ಷೇತ್ರಗಳಿಗೆ ಅಭ್ಯರ್ಥಿ

Comments

Leave a Reply

Your email address will not be published. Required fields are marked *