80ರ ಮಹಿಳೆ, ಮೂವರು ಪುತ್ರಿಯರು, ಓರ್ವ ಗಾರ್ಡ್ ಚಾಕು ಇರಿತದಿಂದ ಮನೆಯಲ್ಲೇ ಸಾವು

ನವದೆಹಲಿ: ನಗರದ ಮನೆಯೊಂದರಲ್ಲಿ 82 ವಯಸ್ಸಿನ ವೃದ್ಧ ಮಹಿಳೆ, ಆಕೆಯ 3 ಹೆಣ್ಣುಮಕ್ಕಳು ಮತ್ತು ಸೆಕ್ಯೂರಿಟಿ ಗಾರ್ಡ್‍ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.

ನಗರದ ಶಹ್ದಾರಾದ ಮಾನ್‍ಸರೋವರ್ ಪಾರ್ಕ್ ಪ್ರದೇಶದ ಮನೆಯೊಂದರಲ್ಲಿ ಮೃತ ದೇಹಗಳು ಪತ್ತೆಯಾಗಿವೆ. ಮೃತರನ್ನು ಊರ್ಮಿಳಾ(82), ಆಕೆಯ ಮಕ್ಕಳಾದ ಸಂಗೀತ ಗುಪ್ತಾ(56), ನೂಪುರ್ ಜಿಂದಾಲ್(48) ಮತ್ತು ಅಂಜಲಿ ಜಿಂದಾಲ್(38) ಹಾಗೂ ಸೆಕ್ಯೂರಿಟಿ ಗಾರ್ಡ್ ರಾಕೇಶ್(42) ಎಂದು ಗುರುತಿಸಲಾಗಿದೆ.

ಇಂದು ಮುಂಜಾನೆ 7 ಗಂಟೆ ಸಮಯದಲ್ಲಿ ದೆಹಲಿ ಪೊಲೀಸ್ ಕಾಂಟ್ರೋಲ್ ರೂಮ್‍ಗೆ ಈ ಬಗ್ಗೆ ಕರೆ ಬಂದಿತ್ತು. ಮಾಹಿತಿ ಆಧಾರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ.

ಮನೆಯನ್ನು ಬಲವಂತವಾಗಿ ಪ್ರವೇಶ ಮಾಡಲು ಯಾರೂ ಪ್ರಯತ್ನಿಸಿಲ್ಲ ಹಾಗೂ ಮನೆಯಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಕಳ್ಳತನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬ ಸದಸ್ಯರಿಗೆ ಗೊತ್ತಿರುವವರಿಂದಲೇ ಹತ್ಯೆ ನಡೆದಿದೆ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆಸ್ತಿ ಕಲಹದಿಂದ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದಾರೆ. ಘಟನಾ ಸ್ಥಳದಲ್ಲಿ ಸಿಕ್ಕ ಚಾಕುವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆಯ ಕುರಿತು ಎಫ್‍ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Comments

Leave a Reply

Your email address will not be published. Required fields are marked *