ಕೊಳವೆ ಬಾವಿಗೆ ಬಿದ್ದ ಮಗು- 10 ಗಂಟೆಗಳ ಕಾರ್ಯಾಚರಣೆ ನಂತ್ರ ರಕ್ಷಣೆ

ಭೋಪಾಲ್: 80 ಅಡಿ ಆಳದ ಕೊಳವೆ ಬಾವಿಗೆ ಬಿದ್ದ, ಒಂದು ವರ್ಷದ ಹೆಣ್ಣು ಮಗುವನ್ನು ಪೊಲೀಸರು ಮತ್ತು ರಾಜ್ಯ ವಿಪತ್ತು ತುರ್ತು ಮೀಸಲು ಪಡೆ (SDERF) 10 ಗಂಟೆ ಕಾರ್ಯಾಚರಣೆ ಮಾಡಿ ರಕ್ಷಿಸಿದ್ದಾರೆ.

ಜಮೀನಿನಲ್ಲಿ ತಾಯಿ ಕೆಲಸ ಮಾಡುತ್ತಿದ್ದ ವೇಳೆ ದಿವ್ಯಾಂಶಿ ಆಟವಾಡುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ ದಿವ್ಯಾಂಶಿ ಕಣ್ಮರೆಯಾಗಿದ್ದಳು. ಈ ವೇಳೆ ಹುಡುಕಾಡಿದಾಗ ಮಗು ತೆರೆದ ಕೊಳವೆ ಬಾವಿಗೆ ಬಿದ್ದಿರುವುದು ತಿಳಿದು ಬಂದಿದೆ. ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

80 ಅಡಿ ಆಳ ಇರುವ ಕೊಳವೆ ಬಾವಿಯಲ್ಲಿ, ಸುಮಾರು 15 ಅಡಿ ಆಳದಲ್ಲಿ ದಿವ್ಯಾಂಶಿ ಸಿಲುಕಿಕೊಂಡಿರುವುದು ಗೊತ್ತಾಗಿದೆ. ಮಗುವಿನ ಅಳುವ ಶಬ್ದ ಕೇಳಿಸಿದ ಪೊಲೀಸರು ಆಮ್ಲಜನಕದ ಒದಗಿಸಿದ್ದಾರೆ. ಬಳಿಕ ಗ್ವಾಲಿಯರ್‍ನಿಂದ ಬಂದ SDERF ತಂಡವು ಕಾರ್ಯಾಚರಣೆ ಕೈಗೊಂಡಿತು. ಕೊಳವೆ ಬಾವಿಗೆ ಸಿಸಿಟಿವಿ ಆಳವಡಿಸಿ ಮಗುವಿನ ಚಲನೆಯನ್ನು ಗಮನ ವಹಿಸಲಾಯಿತು. ನಂತರ ಜೆ.ಸಿ.ಬಿ ಯಂತ್ರಗಳನ್ನು ಬಳಸಿ ಕೊಳವೆ ಬಾವಿಗೆ ಸಮಾನಾಂತರವಾಗಿ ಗುಂಡಿ ತೋಡಿ ಬಾಲಕಿಯನ್ನು ರಕ್ಷಿಸಲಾಯಿತು. ಇದನ್ನೂ ಓದಿ: ಒಂಟಿಯಾಗಿದ್ದ ಅಮ್ಮನಿಗೆ ಮದುವೆ ಮಾಡಿಸಿದ ಮಗಳು

ಛತ್ತರ್‍ಪುರ ಜಿಲ್ಲೆಯ ಗೌಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ 3.30ರ ಹೊತ್ತಿಗೆ ಕೊಳವೆ ಬಾವಿಗೆ ಬಿದ್ದ ದಿವ್ಯಾಂಶಿಯನ್ನು ಸುಮಾರು 10 ಗಂಟೆ ನಡೆದ ಸತತ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ. ಮಗುವನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಛತ್ತರ್‍ಪುರ ಜಿಲ್ಲಾಧಿಕಾರಿ ಟ್ವೀಟ್ ಮಾಡಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಸ್ಪರ್ಧಿ ಸೇರಿ 17 ಮಂದಿಗೆ ಕೊರೊನಾ- Miss World 2021 ಫೈನಲ್‌ ಮುಂದೂಡಿಕೆ

Comments

Leave a Reply

Your email address will not be published. Required fields are marked *