ಮದುವೆಗೆ ಹೋಗುತ್ತಿದ್ದವರು ಮಸಣಕ್ಕೆ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 8 ಮಂದಿ ದುರ್ಮರಣ

ಜೈಪುರ: ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಟ್ರಕ್ ಮತ್ತು ಎಸ್‍ಯುವಿ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಒಬ್ಬರಿಗೆ ಗಂಭೀರವಾಗಿ ಗಾಯವಾಗಿದೆ.

ಗುಡಾ ಮಲಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಮೆಗಾ ಹೈವೇ ಬಳಿ ಈ ಘಟನೆ ನಡೆದಿದೆ. ಒಟ್ಟು ಒಂಬತ್ತು ಜನರು ಎಸ್‍ಯುವಿ ಕಾರಿನಲ್ಲಿ ಜಲೋರ್ ಜಿಲ್ಲೆಯ ಸೇಡಿಯಾದಿಂದ ಗುಡಾ ಮಲಾನಿಯ ಕಂಧಿ ಕಿ ಧನಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿಬಂದ ಟ್ರಕ್ ಎಸ್‍ಯುವಿಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರ – ತಮಿಳುನಾಡಿನಿಂದ ಹೊಸ ತಕರಾರು 

ಡಿಕ್ಕಿ ಹೊಡೆದ ರಭಸಕ್ಕೆ ಕುಟುಂಬದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ. ಒಬ್ಬರಿಗೆ ಗಂಭೀರವಾಗಿ ಗಾಯವಾಗಿದೆ. ಎಸ್‍ಯುವಿ ಒಂದು ಭಾಗ ಸಂಪೂರ್ಣವಾಗಿ ನಾಶವಾಗಿದೆ. ವಾಹನದಿಂದ ದೇಹಗಳನ್ನು ಹೊರತೆಗೆಯಲು ಸುಮಾರು ಎರಡು ಗಂಟೆ ಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಪುನ್ಮಾ ರಾಮ್(45), ಪ್ರಕಾಶ್ ಬಿಷ್ಣೋಯ್(28), ಮನೀಶ್ ಬಿಷ್ಣೋಯ್(12), ಪ್ರಿನ್ಸ್ ಬಿಷ್ಣೋಯ್(5), ಭಾಗೀರಥ್ ರಾಮ್(38), ಪುನ್ಮಾ ರಾಮ್(48), ಮಂಗಿಲಾಲ್ ಬಿಷ್ಣೋಯ್(38) ಮತ್ತು ಬುಧರಾಮ್ ಬಿಷ್ಣೋಯ್(38) ಎಂದು ಗುರುತಿಸಲಾಗಿದೆ.

Rajasthan: A fierce collision between the car and truck of the wedding processions in Barmer, 8 people of the same family died

ಪ್ರತ್ಯಕ್ಷದರ್ಶಿ ಭೋಮಾ ರಾಮ್ ಈ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದು, ನನಗೆ ಘಟನೆ ನಡೆದ ಸ್ಥಳದಿಂದ ದೊಡ್ಡ ಶಬ್ದ ಕೇಳಿಸಿತು. ತಕ್ಷಣ ನಾನು ಸ್ಥಳಕ್ಕೆ ಧಾವಿಸಿ ನೋಡಿದಾಗ ವಾಹನದಲ್ಲಿದ್ದವರು ಸಹಾಯಕ್ಕಾಗಿ ಕಿರುಚುತ್ತಿದ್ದರು. ಟ್ರಕ್‍ನ ಚಾಲಕ ಗಾಯಗೊಂಡಿದ್ದ. ನಾನು ಮತ್ತು ಸ್ಥಳೀಯರು ಪೊಲೀಸರಿಗೆ ತಿಳಿಸಿ ದೇಹಗಳನ್ನು ಹೊರತೆಗೆದೆವು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: RSS ಚಡ್ಡಿ ಬಗ್ಗೆ ಸಿದ್ದರಾಮಯ್ಯ ಭಯಭೀತರಾಗಿದ್ದಾರೆ: ಕೋಟ ಶ್ರೀನಿವಾಸ ಪೂಜಾರಿ 

ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *