ಸಂಬಂಧಿಯಿಂದಲೇ 8 ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ

ನವದೆಹಲಿ: 8 ತಿಂಗಳ ಹಸುಗೂಸಿನ ಮೇಲೆ ಸಂಬಂಧಿಯೇ ದಾರುಣವಾಗಿ ಅತ್ಯಾಚಾರ ಎಸಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ನೇತಾಜಿ ಸುಭಾಷ್ ಪ್ರದೇಶದಲ್ಲಿ ನಡೆದಿದೆ.

ಅತ್ಯಾಚಾರವಾದ ಮಗುವಿನ ಪೋಷಕರು ದಿನಗೂಲಿ ನೌಕಕರರಾಗಿದ್ದು, ಕೆಲಸದ ನಿಮಿತ್ತ ಮಗುವನ್ನು ತಮ್ಮ ಸಂಬಂಧಿಗಳ ಮನೆಯಲ್ಲಿ ಬಿಟ್ಟು ತೆರಳಿದ್ದರು. ಈ ವೇಳೆ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಆರೋಪಿ ಅತ್ಯಾಚಾರ ನಡೆಸಿದ್ದಾನೆ.

ಸೋಮವಾರ ರಾತ್ರಿ ಕೆಲಸದಿಂದ ಮನೆಗೆ ಬಂದ ಪೋಷಕರು ರಕ್ತದ ಮಡುವಿನಲ್ಲಿ ಮಗು ಬಿದ್ದಿರುವುದನ್ನು ನೋಡಿದ್ದಾರೆ. ಈ ಭೀಕರ ದೃಶ್ಯವನ್ನು ಕಂಡ ಪೋಷಕರು ಮಗುವನ್ನು ಆಸ್ಪತ್ರಗೆ ದಾಖಲಿಸಿದ್ದಾರೆ. ಮಗುವನ್ನು ಪರೀಕ್ಷೆ ನಡೆಸಿದ ವೈದ್ಯರು ಅತ್ಯಾಚಾರ ನಡೆದಿರುವುದನ್ನು ಖಚಿತ ಪಡಿಸಿದ್ದಾರೆ.

ಮಗುವಿನ ಮೇಲೆ ಅತ್ಯಾಚಾರ ಎಸಗಿರುವುದರಿಂದ ತೀವ್ರ ಪ್ರಮಾಣದಲ್ಲಿ ರಕ್ತಸ್ರಾವವಾಗಿದ್ದು, ವೈದ್ಯರು ಸತತ ಮೂರು ಗಂಟೆಗಳ ಕಾಲ ಅಪರೇಷನ್ ನಡೆಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಿದ್ದಾರೆ.

 

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕುಡಿದ ಮತ್ತಿನಲ್ಲಿ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿನ ಮೇಲಿನ ಅತ್ಯಾಚಾರವನ್ನು ದೆಹಲಿ ಮುಖ್ಯ ಮಹಿಳಾ ಪೊಲೀಸ್ ಕಮಿಷನರ್ ಖಂಡಿಸಿದ್ದು, ಆರೋಪಿ ಒಂದು ಮಗುವಿನ ತಂದೆಯಾಗಿದ್ದರು, ಮನವೀಯತೆ ತಲೆ ತಗ್ಗಿಸುವ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ.

ದೆಹಲಿ ಮಾತ್ರವಲ್ಲದೇ ನೆರೆಯ ರಾಜ್ಯ ಹರಿಯಾಣದಲ್ಲೂ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ದೆಹಲಿಯಾ ನಿರ್ಭಯಾ ಪ್ರಕರಣದ ಬಳಿಕ ಅತ್ಯಾಚಾರಿಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಯಾಗಿದೆ. ಪ್ರಕರಣದಲ್ಲಿ ಆರೋಪಿಯ ಕೃತ್ಯಕ್ಕೆ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಗಳಿದೆ.

Comments

Leave a Reply

Your email address will not be published. Required fields are marked *